‘ಮಿನ್ನಲ್ ಮುರಳಿ’ ಸೂಪರ್‌ ಹೀರೋ ಸಿನಿಮಾ ಖ್ಯಾತಿಯ ಟೊವಿನೋ ಥಾಮಸ್‌ ನೂತನ ಮಲಯಾಳಂ ಸಿನಿಮಾ ‘ARM’ ಟೀಸರ್‌ ಬಿಡುಗಡೆಯಾಗಿದೆ. ಗ್ರಾಮೀಣ ಹಿನ್ನೆಲೆಯ ಕಥಾವಸ್ತು. ಕೃತಿ ಶೆಟ್ಟಿ ಸಿನಿಮಾದ ಹಿರೋಯಿನ್‌. ಕನ್ನಡ ಡಬ್ಬಿಂಗ್‌ ಅವತರಣಿಕೆಯಲ್ಲೂ ಸಿನಿಮಾ ತೆರೆಕಾಣಲಿದೆ.

ಕಳೆದ ವರ್ಷ ‘ಮಿನ್ನಲ್ ಮುರಳಿ’ ಸೂಪರ್‌ ಹೀರೋ ಸಿನಿಮಾ ಮೂಲಕ ನಟ ಟೊವಿನೋ ಥಾಮಸ್‌ ವೃತ್ತಿಬದುಕಿನಲ್ಲಿ ಒಂದೊಳ್ಳೆ ಬ್ರೇಕ್‌ ಪಡೆದಿದ್ದರು. ಇದೀಗ ಅವರು ಮತ್ತೊಂದು ಹೆಜ್ಜೆ ಮುಂದೆ ಸಾಗಿ PAN ಇಂಡಿಯಾ ಸಿನಿಮಾ ‘ARM’ ಮಾಡಿದ್ದು, ಟೀಸರ್‌ ರಿಲೀಸ್‌ ಆಗಿದೆ. ಮೂಲ ಮಲಯಾಳಂನಲ್ಲಿ ತಯಾರಾಗಿರುವ ‘ಅಜಯಂತೆ ರಂದಂ ಮೋಷನಂ’ (ARM) ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ, ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಲೋಕೇಶ್ ಕನಕರಾಜ್ ಮತ್ತು ಆರ್ಯ ಸೋಷಿಯಲ್ ಮೀಡಿಯಾ ಮೂಲಕ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಚಿತ್ರದಲ್ಲಿ ಟೊವಿನೋ ಥಾಮಸ್ ಮಾಸ್ ಅವತಾರದಲ್ಲಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಘಟನೆ ಸುತ್ತ ಇಡೀ ಟೀಸರ್ ಸಾಗುತ್ತದೆ. ಟೊವಿನೋ ಥಾಮಸ್ ವೃತ್ತಿ ಜೀವನದ ಬಹುವಿಶೇಷ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸಿದ್ದು, ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿ ನಿಭಾಯಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಶೆಟ್ಟಿ ಈ ಚಿತ್ರದೊಂದಿಗೆ ಮಲಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅವರು ನಾಯಕಿ ಪಾತ್ರದಲ್ಲಿದ್ದು ಉಳಿದ ಪ್ರಮುಖ ಪಾತ್ರಗಳಲ್ಲಿ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಇದ್ದಾರೆ. ಸುಜಿತ್ ನಂಬಿಯಾರ್‌ ಕತೆ, ಚಿತ್ರಕಥೆ ರಚಿಸಿದ್ದು, ಜಿತಿನ್‌ ಲಾಲ್‌ ಸಿನಿಮಾ ನಿರ್ದೇಶಿಸಿದ್ದಾರೆ. 3Dಯಲ್ಲಿಯೂ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

Previous articleKillers of the Flower Moon ಟೀಸರ್ | Leonardo DiCaprio ನಟನೆಯ ಸಿನಿಮಾ
Next articleಬೆಂಗಳೂರಿನಲ್ಲಿ ಅಕ್ಷಯ್‌ apparel brand ‘Force IX’ | ಟ್ವೀಟ್‌ ಮಾಡಿದ ನಟ

LEAVE A REPLY

Connect with

Please enter your comment!
Please enter your name here