ನಟ ಸುದೀಪ್‌ ಬರ್ತ್‌ಡೇ ದಿನವಾದ ಇಂದು ಅವರ ‘MAX’ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ವಿಜಯ್‌ ಕಾರ್ತಿಕೇಯ ನಿರ್ದೇಶನದಲ್ಲಿ ತಯಾರಾಗಲಿರುವ ಸಿನಿಮಾದ ಟೀಸರ್‌ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿದೆ.

ಇಂದು (ಸೆಪ್ಟೆಂಬರ್ 2) ಸುದೀಪ್‌ ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಹಲವೆಡೆಯಿಂದ ಭರಪೂರ ಶುಭಾಶಯಗಳು ಸಲ್ಲುತ್ತಿವೆ. ಎಲ್ಲ ಕಡೆಗಳಿಂದ ಅವರಿಗೆ ಶುಭಾಶಯ ಬರುತ್ತಿದೆ. ‘ಕಿಚ್ಚ 46’ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಸಿನಿಮಾಗೆ ‘ಮ್ಯಾಕ್ಸ್’ ಎನ್ನುವ ಶೀರ್ಷಿಕೆ ನಿಗದಿಯಾಗಿದ್ದು, ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದ್ದು, ಇದರ ಜೊತೆಗೆ ಸುದೀಪ್‌ ನೂತನ ಸಿನಿಮಾಗಳ ಘೋಷಣೆ ಆಗಿದೆ. ‘ಗಾಡಿಗಳಲ್ಲಿ ವೆಪನ್ಸ್ ತಗೊಂಡು ಬರ್ತಾ ಇದಾರೆ ಸರ್’ ಎಂಬ ಮಾಹಿತಿ ಪೊಲೀಸರಿಗೆ ಬರುತ್ತದೆ. ಆದರೆ, ಇದಕ್ಕೆ ಪೊಲೀಸರು ಹೆದರಲ್ಲ. ಏಕೆಂದರೆ ಅವರ ಬಳಿ ‘ಮ್ಯಾಕ್ಸ್’ ಇದ್ದಾನೆ. ‘ಬರುವವರು ಜ್ವಾಲಾಮುಖಿಯಿಂದ, ಚಂಡಮಾರುತದಿಂದ, ಭೂಕಂಪದಿಂದ, ಸುನಾಮಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ರ ಸಿಕ್ಕಿಬಿದ್ದರೆ ಸಾವೇ ಇಲ್ಲ ಎಂದು ವರ ಪಡೆದು ಹುಟ್ಟಿದವನಿಗೂ ಸಾವು ಗ್ಯಾರಂಟಿ’ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು. ಬಳಿಕ ಲಾಟಿ ಹಿಡಿದು ಬರುತ್ತಾರೆ ಸುದೀಪ್. ಈ ಮೂಲಕ ಸುದೀಪ್ ಪೊಲೀಸ್ ಪಾತ್ರ ಮಾಡುತ್ತಿರುವ ಸೂಚನೆ ನೀಡಿದ್ದಾರೆ.

‘ಮದಕರಿ’, ‘ಹುಬ್ಬಳ್ಳಿ’, ‘ತಿರುಪತಿ’, ‘ಕೆಂಪೇಗೌಡ’, ‘ವರದನಾಯಕ’, ‘ಕಬ್ಜ’ ಸಿನಿಮಾಗಳಲ್ಲಿ ಸುದೀಪ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಮ್ಯಾಕ್ಸ್’ ಚಿತ್ರಕ್ಕಾಗಿ ಮತ್ತೆ ಖಾಕಿ ತೊಟ್ಟಿದ್ದಾರೆ. V Creations ಮತ್ತು Kiccha Creations ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ವಿಜಯ್ ಕಾರ್ತಿಕೇಯ ನಿರ್ದೇಶನ ಚಿತ್ರಕ್ಕೆ ಬಿ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here