ಸುಜೀತ್‌ ನಿರ್ದೇಶನದಲ್ಲಿ ಪವನ್‌ ಕಲ್ಯಾಣ್‌ ನಟಿಸಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ ‘OG’ ಟೀಸರ್‌ ಬಿಡುಗಡೆಯಾಗಿದೆ. ಹಿಂದಿ ನಟ ಇಮ್ರಾನ್‌ ಹಶ್ಮಿ ಈ ಸಿನಿಮಾ ಮೂಲಕ ಟಾಲಿವುಡ್‌ ಪ್ರವೇಶಿಸುತ್ತಿದ್ದಾರೆ.

ಪವನ್‌ ಕಲ್ಯಾಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘OG’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಪವನ್‌ ಕಲ್ಯಾಣ್‌ ಇಂದು (ಸೆಪ್ಟೆಂಬರ್ ‌2) 52ನೇ ವರ್ಷ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಚಿತ್ರವನ್ನು ಸುಜೀತ್ ನಿರ್ದೇಶಿಸಿದ್ದಾರೆ. ಟೀಸರ್‌ನಲ್ಲಿ ಪವನ್‌ ಕಲ್ಯಾಣ್‌ ತನ್ನ ಸಿಂಹಾಸನವನ್ನು ಮರಳಿ ಪಡೆಯಲು ಹತ್ತು ವರ್ಷಗಳ ನಂತರ ಮುಂಬೈಗೆ ಹಿಂದಿರುಗುತ್ತಿರುವಂತೆ ತೋರಿಸಲಾಗಿದೆ. ಅವರ ಪೂರ್ವಜರ ಆಳ್ವಿಕೆಯಲ್ಲಿ ಮಹಾರಾಷ್ಟ್ರದ ರಾಜಧಾನಿಯಲ್ಲಿ ಭಯಂಕರ ರಕ್ತಪಾತ ಆಗಿದ್ದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ. ಪವನ್ ಕಲ್ಯಾಣ್ ತನ್ನ ಭುಜದ ಮೇಲೆ ಬೃಹತ್ ರೈಫಲ್ ಹೊತ್ತುಕೊಂಡು ನಡೆಯುವುದರೊಂದಿಗೆ ಟೀಸರ್‌ ಅಂತ್ಯಗೊಳ್ಳುತ್ತದೆ.

ಈ ಚಿತ್ರದ ಮೂಲಕ ಇಮ್ರಾನ್ ಹಶ್ಮಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತರ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕಾ ಅರುಲ್ ಮೋಹನ್, ಪ್ರಕಾಶ್ ರಾಜ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿ ನಟಿಸಿದ್ದಾರೆ. DVV Entertainment ಬ್ಯಾನರ್‌ ಅಡಿ DVV ದಾನಯ್ಯ ಸಿನಿಮಾ ನಿರ್ಮಿಸುತ್ತಿದ್ದಾರೆ. S ತಮನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ. ಪವನ್‌ ಕಲ್ಯಾಣ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ಸಿನಿಮಾಗಳ ಮಾಹಿತಿ ಹೊರಬರುತ್ತಿವೆ. ‘ಹರಿಹರ ವೀರ ಮಲ್ಲು’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ‘ಉಸ್ತಾದ್ ಭಗತ್ ಸಿಂಗ್’ ಫಸ್ಟ್‌ ಲುಕ್ ಪೋಸ್ಟರ್ ಹೊರಬಿದ್ದಿದೆ.

Previous article‘MAX’ ಟೈಟಲ್‌ ಟೀಸರ್‌ | ವಿಜಯ್‌ ಕಾರ್ತಿಕೇಯ ನಿರ್ದೇಶನದ ಸುದೀಪ್‌ ಸಿನಿಮಾ
Next articleಗೌರಿಯಾಗಿ ಬಂದು ಚಪ್ಪಾಳೆ ಗಿಟ್ಟಿಸಿಕೊಂಡ ಸುಶ್ಮಿತಾ ಸೇನ್

LEAVE A REPLY

Connect with

Please enter your comment!
Please enter your name here