ರಾಜ್‌ವೀರ್‌ ಡಿಯೋಲ್‌ ಮತ್ತು ಪಲೋಮಾ ಠಾಕೇರಿಯಾ ನಟನೆಯ ಚೊಚ್ಚಲ ಹಿಂದಿ ಸಿನಿಮಾ ‘ದೋನೋ’ ಟ್ರೈಲರ್‌ ಬಿಡುಗಡೆಯಾಗಿದೆ. ಖ್ಯಾತ ಬಾಲಿವುಡ್‌ ಚಿತ್ರನಿರ್ದೇಶಕ ಸೂರಜ್‌ ಬರ್ಜಾತ್ಯಾ ಪುತ್ರ ಅವನೀಶ್‌ ಬರ್ಜಾತ್ಯಾ ನಿರ್ದೇಶನದ ಚೊಚ್ಚಲ ಚಿತ್ರವಿದು. ‘ದೋನೋ’ ಅಕ್ಟೋಬರ್‌ 5ರಂದು ತೆರೆಕಾಣಲಿದೆ.

ಅವನೀಶ್‌ ಬರ್ಜಾತ್ಯಾ ನಿರ್ದೇಶನದ ‘ದೋನೋ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಟಿ ಪೂನಂ ಧಿಲ್ಲೋನ್ ಅವರ ಮಗಳು ಪಲೋಮಾ ಠಾಕೇರಿಯಾ ಮತ್ತು ನಟ ಸನ್ನಿ ಡಿಯೋಲ್ ಪುತ್ರ ರಾಜವೀರ್ ಡಿಯೋಲ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ಚಿತ್ರವಿದು. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸೂರಜ್‌ ಬಾರ್ಜಾತ್ಯಾ ಪುತ್ರ ಅವನೀಶ್ ಬರ್ಜಾತ್ಯಾ ಈ ಚಿತ್ರದೊಂದಿಗೆ ನಿರ್ದೇಶಕರಾಗಿದ್ದಾರೆ. ಟ್ರೈಲರ್‌, ಹಲವು ಬಾಲಿವುಡ್‌ ಸಿನಿಮಾಗಳ ಪ್ರೇಮಕತೆಗಳನ್ನು ನೆನಪಿಸುತ್ತದೆ. ದೇವ್ ಪ್ರೀತಿಯಿಂದ ಮೋಸ ಹೋಗಿ ತನ್ನ ಆತ್ಮೀಯ ಗೆಳೆಯನ ಮದುವೆ ಸಮಾರಂಭದಲ್ಲಿದ್ದಾನೆ. ಮದುವೆಯಲ್ಲಿ ಅವನು ಮೇಘನಾಳನ್ನು ಭೇಟಿಯಾಗುತ್ತಾನೆ, ಮೇಘನಾ ಆರು ವರ್ಷಗಳ ಮುರಿದುಬಿದ್ದ ಪ್ರೀತಿಯ ನೆನಪಿನಲ್ಲಿರುತ್ತಾಳೆ. ಇವರಿಬ್ಬರು ಹೇಗೆ ಪರಸ್ಪರ ಸಮಾಧಾನ ಕಂಡುಕೊಳ್ಳುತ್ತಾರೆ ಎಂಬುದು ಕಥೆಯ ತಿರುಳು.

‘ಮೈನೆ ಪ್ಯಾರ್ ಕಿಯಾ’ ಮತ್ತು ‘ಹಮ್ ಆಪ್ಕೆ ಹೈ ಕೌನ್‌’ನಂತಹ ಪ್ರೇಮಕಥೆಗಳನ್ನು ರಚಿಸಿರುವ Rajashree Productions ಈ ಚಿತ್ರವನ್ನು ನಿರ್ಮಿಸುತ್ತಿದೆ. ನಿರ್ದೇಶಕ ಅವ್ನೀಶ್ ಬರ್ಜಾತ್ಯಾ ಅವರು ಈ ಹಿಂದೆ ತಮ್ಮ ತಂದೆಯ ನಿರ್ದೇಶನದ ‘ಪ್ರೇಮ್ ರತನ್ ಧನ್ ಪಾಯೋ’ ಮತ್ತು ‘ಉಂಚೈ’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಶಂಕರ್‌ ಮಹದೇವನ್‌, ಇಶಾನ್‌ ನೋರಾನಿ ಮತ್ತು ಲಾಯ್‌ ಸಂಗೀತ ಸಂಯೋಜಿಸಿದ್ದಾರೆ. ಅಕ್ಟೋಬರ್ 5ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here