ಹಾಲಿವುಡ್‌ ತಾರೆ ಲಿಯಾನಾರ್ಡೋ ಡಿಕ್ಯಾಪ್ರಿಯೋ ಇಂದು 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಐಕಾನಿಕ್ ಸಿನಿಮಾ ‘ಟೈಟಾನಿಕ್’ (1997) ಹೀರೋ ಆಗಿ ಲಿಯನಾರ್ಡೋ ಡಿಕ್ಯಾಪ್ರಿಯೋ ಮೊದಲ ಆಯ್ಕೆ ಆಗಿರಲಿಲ್ಲ. ನಟ ಜೆರೆಮಿ ಸಿಸ್ಟೋ ಕೂಡ ಪಟ್ಟಿಯಲ್ಲಿದ್ದರು. ಅದೃಷ್ಟವಂತ ಡಿಕ್ಯಾಪ್ರಿಯೋ ಸಿನಿಮಾದ ಹೀರೋ ಆದರು.

* ಲಿಯಾನಾರ್ಡೋ ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ಕ್ರೈಟರ್ಸ್ 3’ ಹಾಲಿವುಡ್ ಚಿತ್ರದಲ್ಲಿ. ಅದೊಂದು ಸೈಂಟಿಫಿಕ್ ಫಿಕ್ಷನ್ – ಕಾಮಿಡಿ ಹಾರರ್. ಆಗ ಕ್ಯಾಪ್ರಿಯೋಗೆ 16 ವರ್ಷ. ಇದಕ್ಕೂ ಮುನ್ನ ‘ರಾಂಪರ್ ರೂಂ’ ಟೀವಿ ಶೋನಲ್ಲಿ ಕಾಣಿಸಿಕೊಂಡಿದ್ದರು.

* ಚಿತ್ರಕಲಾವಿದ ಲಿಯಾನಾರ್ಡೋ ಡಾ ವಿನ್ಸಿ ಪ್ರೇರಣೆಯಿಂದ ಕ್ಯಾಪ್ರಿಯೋ ತಾಯಿ ಮಗನಿಗೆ ಲಿಯಾನಾರ್ಡೋ ಎಂದು ನಾಮಕರಣ ಮಾಡಿದ್ದರು.

* 19ನೇ ವಯಸ್ಸಿನಲ್ಲಿ ‘ವಾಟ್ಸ್ ಈಟಿಂಗ್ ಗಿಲ್ಬರ್ಟ್ ಗ್ರೇಪ್’ (1994) ಚಿತ್ರದ ಉತ್ತಮ ನಟನೆಗಾಗಿ ಕ್ಯಾಪ್ರಿಯೋ ಮೊದಲ ಬಾರಿ ಅಕಾಡೆಮಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಮುಂದೆ ಮತ್ತೆ ಮೂರು ಬಾರಿ ನಾಮಿನೇಟ್ ಆದರೂ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಲು ಅವರು ಎರಡು ದಶಕಗಳು (ದಿ ರೆವನೆಂಟ್, 2016) ಕಾಯಬೇಕಾಯ್ತು.

* ಐಕಾನಿಕ್ ಸಿನಿಮಾ ‘ಟೈಟಾನಿಕ್’ (1997) ಹೀರೋ ಆಗಿ ಲಿಯನಾರ್ಡೋ ಡಿಕ್ಯಾಪ್ರಿಯೋ ಮೊದಲ ಆಯ್ಕೆಯೇನೂ ಆಗಿರಲಿಲ್ಲ. ನಟ ಜೆರೆಮಿ ಸಿಸ್ಟೋ ಕೂಡ ಪಟ್ಟಿಯಲ್ಲಿದ್ದರು. ನಟಿ ಕೇಟ್ ವಿನ್‍ಸ್ಲೆಟ್ ಜೊತೆ ಜೆರೆಮಿ ಸ್ಕ್ರೀನ್ ಟೆಸ್ಟ್ ಕೂಡ ಆಗಿತ್ತು. ಅಂತಿಮವಾಗಿ ಡಿಕ್ಯಾಪ್ರಿಯೋ ಆಯ್ಕೆಯಾಗಿ ಅದೃಷ್ಟಶಾಲಿಯಾದರು.

* ಡಿಕ್ಯಾಪ್ರಿಯೋ ಅಭಿನಯದ ‘ದಿ ಗ್ರೇಟ್‌ ಗಾಟ್ಸ್‌’ಬೈ’ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ನಟಿಸಿದ್ದರು.

* ಕ್ಯಾಪ್ರಿಯೋ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದು, ವಿಶೇಷವಾಗಿ ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here