2023ನೇ ಸಾಲಿನ OTTplay Awards ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಕನ್ನಡಿಗ ರಕ್ಷಿತ್ ಶೆಟ್ಟಿ ‘Pioneering Contributions to New Wave Cinema’ ಪ್ರಶಸ್ತಿ ಪಡೆದಿದ್ದಾರೆ. ಸಿನಿಮಾ ಮತ್ತು ವೆಬ್ ಸರಣಿ ವಿಭಾಗಗಳಲ್ಲಿ ಪ್ರತಿಭಾವಂತರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.
ಮುಂಬೈನಲ್ಲಿ OTTplay Awards 2023 ಸಮಾರಂಭ ಅದ್ಧೂರಿಯಾಗಿ ಜರುಗಿದೆ. ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕನ್ನಡಿಗ ರಕ್ಷಿತ್ ಶೆಟ್ಟಿ, ಕಾರ್ತಿಕ್ ಆರ್ಯನ್, ಅಲಯಾ ಎಫ್, ಸಾನ್ಯಾ ಮಲ್ಹೋತ್ರಾ, ರಾಜಕುಮಾರ್ ರಾವ್, ಅದಿತಿ ರಾವ್ ಹೈದರಿ, ಕಾಜೋಲ್, ರಕ್ಷಿತ್ ಶೆಟ್ಟಿ, ಅನಿಲ್ ಕಪೂರ್, ರಾಣಾ ದಗ್ಗುಬಾಟಿ, ರವೀನಾ ಟಂಡನ್, ಪ್ರೊಸೆನ್‌ಜಿತ್ ಚಟರ್ಜಿ ಸೇರಿದಂತೆ ಹಲವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. OTTplay Awards – 2023 ವಿಜೇತರ ಪಟ್ಟಿ ಇಲ್ಲಿದೆ.
Pioneering Contributions to New Wave Cinema – ರಕ್ಷಿತ್ ಶೆಟ್ಟಿ (‘777 ಚಾರ್ಲಿ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ | ಕನ್ನಡ)
ಅತ್ಯುತ್ತಮ ಚಿತ್ರ – ‘ಡಾರ್ಲಿಂಗ್ಸ್’ (ಹಿಂದಿ) ಜಸ್ಮೀತ್ ಕೆ ರೀನ್ ನಿರ್ದೇಶನ
ಅತ್ಯುತ್ತಮ ಸರಣಿ – ‘ಅಯಾಲಿ’ (ತಮಿಳು) ಮುತ್ತುಕುಮಾರ್ ರಾಜೇಂದ್ರನ್ ಮತ್ತು ನಿರ್ಮಾಪಕ ಎಸ್ ಕುಷ್ಮಾವತಿ ನಿರ್ದೇಶನ
ಅತ್ಯುತ್ತಮ ಚಲನಚಿತ್ರ ನಿರ್ದೇಶಕ – ಮಹೇಶ್ ನಾರಾಯಣನ್ ‘ಅರಿಯಿಪ್ಪು’ (ಮಲಯಾಳಂ)
ಅತ್ಯುತ್ತಮ ಸರಣಿ ನಿರ್ದೇಶಕ ರಾಜ್ ಮತ್ತು ಡಿಕೆ – ‘ಫರ್ಜಿ’, ಪವನ್ ಸಾದಿನೇನಿ (ದಯಾ | ಹಿಂದಿ)
ನೈಜ ಘಟನೆಗಳ ಕುರಿತ ಅತ್ಯುತ್ತಮ ಚಲನಚಿತ್ರ – ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ (ವಿನೋದ್ ಭಾನುಶಾಲಿ | ಹಿಂದಿ)
ಅತ್ಯುತ್ತಮ ಚಿತ್ರಕಥೆ (ಚಲನಚಿತ್ರ) – ‘ಮೋನಿಕಾ, ಓ ಮೈ ಡಾರ್ಲಿಂಗ್’ (ಬರಹಗಾರ ಯೋಗೇಶ್ ಚಂಡೇಕರ್ | ಹಿಂದಿ)
ಅತ್ಯುತ್ತಮ ಚಿತ್ರಕಥೆ (ಸರಣಿ) – ‘ಕೊಹ್ರಾ’ (ಬರಹಗಾರರು ಡಿಗ್ಗಿ ಸಿಸೋಡಿಯಾ ಮತ್ತು ಗುಂಜಿತ್ ಚೋಪ್ರಾ | ಪಂಜಾಬಿ- ಹಿಂದಿ)
ಅತ್ಯುತ್ತಮ ಖಳನಟ (ಚಲನಚಿತ್ರ) – ದರ್ಶನ್ ರಾಜೇಂದ್ರನ್ – (‘ಪುರುಷ ಪ್ರೇತಂ’ | ಮಲಯಾಳಂ)
ಅತ್ಯುತ್ತಮ ಖಳನಟ (ಸರಣಿ) – ರಿಷಿ (ಶೈತಾನ್ | ತೆಲುಗು)
ಅತ್ಯುತ್ತಮ ಹಾಸ್ಯ ನಟ (ಸರಣಿ) – ಅನಿರ್ಬನ್ ಚಕ್ರವರ್ತಿ (ಏಕೆನ್ ಬಾಬು S6 | ಬಂಗಾಳಿ)
OTT ಭರವಸೆಯ ನಟ – ರಾಣಾ ದಗ್ಗುಬಾಟಿ (ರಾಣಾ ನಾಯ್ಡು | ತೆಲುಗು – ಹಿಂದಿ)
OTT ಭರವಸೆಯ ನಟಿ – ಕರಿಷ್ಮಾ ತನ್ನಾ (ಸ್ಕೂಪ್ | ಹಿಂದಿ)
ಅತ್ಯುತ್ತಮ ಪೋಷಕ ನಟ – ಶರೀಬ್ ಹಶ್ಮಿ (ತರ್ಲಾ | ಹಿಂದಿ)
ಅತ್ಯುತ್ತಮ ಪೋಷಕ ನಟಿ – ಚಿತ್ರಾಂಗದಾ ಸಿಂಗ್ (ಗ್ಯಾಸ್‌ಲೈಟ್ | ಹಿಂದಿ)
ಅತ್ಯುತ್ತಮ ಪೋಷಕ ನಟ (ಸರಣಿ) – ಭುವನ್ ಅರೋರಾ (ಫರ್ಜಿ | ಹಿಂದಿ) ಮತ್ತು ಪ್ರೊಸೆನ್‌ಜಿತ್ ಚಟರ್ಜಿ (ಜೂಬಿಲಿ | ಹಿಂದಿ)
ಅತ್ಯುತ್ತಮ ಪೋಷಕ ನಟಿ (ಸರಣಿ) – ಮೋನಾ ಸಿಂಗ್ (ಮೇಡ್ ಇನ್ ಹೆವೆನ್ 2 | ಹಿಂದಿ)
Breakthrough ಪ್ರದರ್ಶನ – ನಟ ಸಿದ್ದಾಂತ್ ಗುಪ್ತಾ (ಜೂಬಿಲಿ | ಹಿಂದಿ)
Breakthrough ಪ್ರದರ್ಶನ – ನಟಿ (ಸರಣಿ) ರಾಜಶ್ರೀ ದೇಶಪಾಂಡೆ (ಟ್ರಯಲ್ ಬೈ ಫೈರ್ | ಹಿಂದಿ)
ಬಹುಮುಖ ಪ್ರದರ್ಶಕ – ಅಭಿಲಾಷ್ ಥಪ್ಲಿಯಾಲ್ (ಬ್ಲರ್ | ಹಿಂದಿ)
ಬಹುಮುಖ ಪ್ರದರ್ಶಕಿ – ವಾಮಿಕಾ ಗಬ್ಬಿ (ಮಾಡರ್ನ್ ಲವ್ ಚೆನ್ನೈ ಮತ್ತು ಜುಬಿಲಿ | ತಮಿಳು – ಹಿಂದಿ)
ಬ್ರೇಕಿಂಗ್ ದಿ ಮೋಲ್ಡ್ – ಅಪರಶಕ್ತಿ ಖುರಾನಾ (ಜೂಬಿಲಿ | ಹಿಂದಿ)
Best Debut Male (ಸರಣಿ) – ಜೆಡಿ ಚಕ್ರವರ್ತಿ (ದಯಾ | ಮಲಯಾಳಂ)
Best Debut Female – ಕಾಜೋಲ್ (ದಿ ಟ್ರಯಲ್ | ಹಿಂದಿ)
OTT Performer of the Year – ರಾಜ್‌ಕುಮಾರ್ ರಾವ್ (ಗನ್ಸ್ ಮತ್ತು ಗುಲಾಬ್ಸ್ ಮತ್ತು ಮೋನಿಕಾ ಓ ಮೈ ಡಾರ್ಲಿಂಗ್ | ಹಿಂದಿ)
OTT Performer of the Year (Female)- ಅದಿತಿ ರಾವ್ ಹೈದರಿ (ತಾಜ್ | ಹಿಂದಿ)
Best Debut Female ಚಲನಚಿತ್ರ – ಅಲಯಾ ಎಫ್ (ಫ್ರೆಡ್ಡಿ | ಹಿಂದಿ)
Best Debut male ಚಲನಚಿತ್ರ – ಬಾಬಿಲ್ ಖಾನ್ (ಕಾಲಾ | ಹಿಂದಿ)
ಅತ್ಯುತ್ತಮ ನಟ ಚಲನಚಿತ್ರ- ನವಾಜುದ್ದೀನ್ ಸಿದ್ದಿಕಿ (ಹಡ್ಡಿ | ಹಿಂದಿ)
ಅತ್ಯುತ್ತಮ ನಟಿ, ಚಲನಚಿತ್ರ – ಸನ್ಯಾ ಮಲ್ಹೋತ್ರಾ (ಕಥಲ್) (ಹಿಂದಿ), ಐಶ್ವರ್ಯ ಲಕ್ಷ್ಮಿ (ಅಮ್ಮು | ತೆಲುಗು)
ಅತ್ಯುತ್ತಮ ನಟ, ಸರಣಿ – ಜಿಮ್ ಸರ್ಭ್ (ರಾಕೆಟ್ ಬಾಯ್ಸ್ 2 | ಹಿಂದಿ) ಮತ್ತು ಅನಿಲ್ ಕಪೂರ್ (ದಿ ನೈಟ್ ಮ್ಯಾನೇಜರ್ | ಹಿಂದಿ)
ಅತ್ಯುತ್ತಮ ನಟಿ ಸರಣಿ – ಶೋಭಿತಾ ಧೂಳಿಪಾಲ (ದಿ ನೈಟ್ ಮ್ಯಾನೇಜರ್ ಮತ್ತು ಮೇಡ್ ಇನ್ ಹೆವನ್) ಮತ್ತು (ಜನಪ್ರಿಯ ಆಯ್ಕೆ) – ಸೋನಾಕ್ಷಿ ಸಿನ್ಹಾ (ದಹಾದ್ | ಹಿಂದಿ)
ಅತ್ಯುತ್ತಮ ನಟ ಚಲನಚಿತ್ರ (ಜನಪ್ರಿಯ ಆಯ್ಕೆ) – ಕಾರ್ತಿಕ್ ಆರ್ಯನ್ (ಫ್ರೆಡ್ಡಿ | ಹಿಂದಿ)
ಅತ್ಯುತ್ತಮ ನಟಿ ಚಲನಚಿತ್ರ (ಜನಪ್ರಿಯ ಆಯ್ಕೆ) – ರಾಕುಲ್ ಪ್ರೀತ್ ಸಿಂಗ್ (ಛತ್ರಿವಾಲಿ | ಹಿಂದಿ)