ನಟ ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಅವರ ವಿವಾಹ ನಿನ್ನೆ (ನವೆಂಬರ್‌ 5) ಕೊಚ್ಚಿಯಲ್ಲಿ ನೆರವೇರಿದೆ. ದಂಪತಿ ತಮ್ಮ ಮದುವೆ ಫೋಟೊಗಳನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಈ ಹಿಂದೆ ತಮಿಳು ನಟ ಎ ಎಲ್‌ ವಿಜಯ್‌ ಅವರನ್ನು ವರಿಸಿದ್ದರು. ಮದುವೆಯಾದ ಮೂರು ವರ್ಷಗಳಲ್ಲಿ ಇಬ್ಬರೂ ಬೇರ್ಪಟ್ಟಿದ್ದರು.

ದಕ್ಷಿಣ ಭಾರತದ ಖ್ಯಾತ ನಾಯಕನಟಿ ಅಮಲಾ ಪೌಲ್‌ ನಿನ್ನೆ ತಮ್ಮ ಬಹುಕಾಲದ ಗೆಳೆಯ ಜಗತ್‌ ದೇಸಾಯಿ ಅವರನ್ನು ವರಿಸಿದ್ದಾರೆ. ಕೊಚ್ಚಿ ಬಾಲ್ಗಟ್ಟಿಯ ಗ್ರ್ಯಾಂಡ್‌ ಹಯಾತ್‌ನಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ವಿವಾಹ ನೆರವೇರಿದೆ. ಗೋವಾ ಮೂಲದ ಜಗತ್‌ ದೇಸಾಯಿ ಅವರು ಗೋವಾದ ಐಶಾರಾಮಿ ವಿಲ್ಲಾವೊಂದರ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರೂ ಮದುವೆ ಫೋಟೊಗಳನ್ನು ತಮ್ಮ Instagram ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಈ ಹಿಂದೆ ತಮಿಳು ನಟ ಎ ಎಲ್‌ ವಿಜಯ್‌ ಅವರನ್ನು ವರಿಸಿದ್ದರು. ಮದುವೆಯಾದ ಮೂರು ವರ್ಷಗಳಲ್ಲಿ ಇಬ್ಬರೂ ಬೇರ್ಪಟ್ಟಿದ್ದರು.

‘ನೀಲಥಮರ’ (2009) ಮಲಯಾಳಂ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅಮಲಾ ಪೌಲ್‌ ಅವರಿಗೆ ‘ಸಿಂಧು ಸಮವೇಲಿ’ ವಿವಾದಿತ ತಮಿಳು ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತು. ಮೈನಾ, ದೈವ ತಿರುಮಗಳ್‌, ವೆಲೈಳ್ಳ ಪಟ್ಟಧಾರಿ, ಥಲೈವಾ, ಆಡೈ.. ಅವರ ಕೆಲವು ಪ್ರಮುಖ ಸಿನಿಮಾಗಳು. ತಮಿಳು ಸಿನಿಮಾ ‘ಕಡವೇರ್‌’, ಮಲಯಾಳಂ ಸಿನಿಮಾ ‘ದಿ ಟೀಚರ್‌’ ನಂತರ ಅವರೀಗ ಪೃಥ್ವಿರಾಜ್‌ ನಟನೆಯ ‘ಆಡುಜೀವಿತಂ’ ಮಲಯಾಳಂ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಅಜಯ್‌ ದೇವಗನ್‌ ನಟನೆಯ ‘ಭೋಲಾ’ ಹಿಂದಿ ಚಿತ್ರದೊಂದಿಗೆ ಅಮಲಾ ಬಾಲಿವುಡ್‌ಗೆ ಪರಿಚಯವಾಗಿದ್ದಾರೆ.

LEAVE A REPLY

Connect with

Please enter your comment!
Please enter your name here