ಕೃತಿಕ ಉದಯನಿಧಿ ನಿರ್ದೇಶನದ ‘ಕಾದಲಿಕ್ಕುಂ ನೇರಮಿಲ್ಲೈ’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಜಯಂ ರವಿ ಮತ್ತು ನಿತ್ಯಾ ಮೆನನ್ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಜಯಂ ರವಿ ಮತ್ತು ನಿತ್ಯಾ ಮೆನನ್ ‘ಕಾದಲಿಕ್ಕಂ ನೇರಮಿಲ್ಲೈ’ ತಮಿಳು ಚಿತ್ರದಲ್ಲಿ ಮೊದಲ ಬಾರಿ ಜೊತೆಯಾಗಿ ನಟಿಸಲಿದ್ದಾರೆ. ಕೃತಿಕ ಉದಯನಿಧಿ ನಿರ್ದೇಶನದ ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಯೋಗಿ ಬಾಬು, ವಿನಯ್ ರೈ, ಲಾಲ್, ಜಾನ್ ಕೊಕ್ಕೆನ್, ಟಿಜೆ ಭಾನು, ಲಕ್ಷ್ಮಿ ರಾಮಕೃಷ್ಣನ್ ಮತ್ತು ವಿನೋದಿನಿ ವೈದ್ಯನಾಥನ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. Red Gaint Movies ನಿರ್ಮಿಸುತ್ತಿರುವ ಈ ಸಿನಿಮಾಗೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ಗಾವೆಮಿಕ್ ಆರಿ ಅವರ ಛಾಯಾಗ್ರಹಣ ಮತ್ತು ಲಾರೆನ್ಸ್ ಕಿಶೋರ್ ಸಂಕಲನ ಇರಲಿದೆ.

ಜಯಂ ರವಿ ಈ ಹಿಂದೆ ‘ಇರೈವನ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಸೈರನ್‌’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಿನಿ , ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್ ಮತ್ತು ವಾಮಿಕಾ ಗಬ್ಬಿ ನಟಿಸಿದ್ದಾರೆ. ಎಂ ರಾಜೇಶ್ ನಿರ್ದೇಶನದಲ್ಲಿ ಪ್ರಿಯಾಂಕಾ ಮೋಹನ್ ಅವರೊಂದಿಗೆ ‘Brother’ ಚಿತ್ರದಲ್ಲಿ ಮತ್ತು ಮೋಹನ್ ರಾಜಾ ನಿರ್ದೇಶನದ ‘ಥನಿ ಒರುವನ್ 2’ ಚಿತ್ರದಲ್ಲಿ ನಯನತಾರಾ ಅವರೊಂದಿಗೆ ಅಭಿನಯಿಸಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ನಿತ್ಯಾ ಮೆನನ್ ಇತ್ತೀಚೆಗೆ ‘ಮಾಸ್ಟರ್ ಪೀಸ್’ ಮತ್ತು ‘ಕುಮಾರಿ ಶ್ರೀಮತಿ’ ವೆಬ್‌ ಸರಣಿಗಳಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here