‘ಆನ್ಲೈನ್ನಲ್ಲಿ ನನ್ನ ಡೀಪ್ ಫೇಕ್ ವಿಡಿಯೋ ಹರಿದಾಡಿದ ಬಗ್ಗೆ ಮಾತನಾಡಲು ನನಗೆ ನಿಜಕ್ಕೂ ನೋವಾಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ’ ಎಂದು ತಮ್ಮ Instagram ಖಾತೆಯಲ್ಲಿ ನಕಲಿ ವೀಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ ನಟಿ ರಶ್ಮಿಕಾ.
ರಶ್ಮಿಕಾ ಮಂದಣ್ಣ ಅವರ ಒಂದು ನಕಲಿ ವಿಡಿಯೋ ವೈರಲ್ ಆಗಿದೆ. ಬೇರೆ ಯುವತಿಯ ದೇಹಕ್ಕೆ ರಶ್ಮಿಕಾ ಅವರ ಮುಖವನ್ನು ಎಡಿಟ್ ಮಾಡಿ ಹಾಕಲಾಗಿದೆ. ಎಷ್ಟೋ ಜನರು ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂದು ನಂಬಿಕೊಂಡಿದ್ದಾರೆ. ಆದರೆ ಈ ನಕಲಿ ವಿಡಿಯೋ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅಮಿತಾಭ್ ಬಚ್ಚನ್ ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ. ಈಗ ಈ ಸಂಗತಿ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಆನ್ಲೈನ್ನಲ್ಲಿ ನನ್ನ ಡೀಪ್ ಫೇಕ್ ವಿಡಿಯೋ ಹರಿದಾಡಿದ ಬಗ್ಗೆ ಮಾತನಾಡಲು ನನಗೆ ನಿಜಕ್ಕೂ ನೋವಾಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ. ಇಂದು ನನಗೆ ಬೆಂಬಲ ಮತ್ತು ರಕ್ಷಣೆ ನೀಡಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಋಣಿ ಆಗಿದ್ದೇನೆ. ಆದರೆ ಇದು ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಇದ್ದಾಗ ಆಗಿದ್ದಿದ್ದರೆ ಅದನ್ನು ನಾನು ಹೇಗೆ ಸರಿಪಡಿಸುತ್ತಿದ್ದೆನೋ ಗೊತ್ತಿಲ್ಲ. ನಮ್ಮಂತಹ ಹೆಚ್ಚಿನ ಜನರು ತೊಂದರೆಗೊಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆ ಬಗ್ಗೆ ನಾವು ಗಮನ ಹರಿಸಬೇಕಾಗಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ತಮ್ಮ Instagramನಲ್ಲಿ ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಗ್ಲಾಮರಸ್ ಅವತಾರದಲ್ಲಿ ಲಿಫ್ಟ್ ಪ್ರವೇಶಿಸುತ್ತಿರುವ ಕೆಲವೇ ಸೆಕೆಂಡ್ಗಳ ವಿಡಿಯೋ ಇದರಲ್ಲಿದೆ. ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
information https://t.co/WHk5rxsNYj
— Amitabh Bachchan (@SrBachchan) November 5, 2023