ಕಮಲ ಹಾಸನ್‌ ‘KH234’ ಚಿತ್ರದ ಶೀರ್ಷಿಕೆ ‘Thug Life’ ಎಂದಾಗಿದೆ. ಮಣಿರತ್ನಂ ನಿರ್ದೇಶನದ ಈ ತಮಿಳು ಸಿನಿಮಾದ ಟೈಟಲ್‌ ಟೀಸರ್‌ ಇಂದು ಬಿಡುಗಡೆಯಾಗಿದೆ. ನಾಳೆ (ನವೆಂಬರ್‌ 7) ಕಮಲ್‌ ಹುಟ್ಟುಹಬ್ಬ. ಅವರ ಜನ್ಮದಿನ ಅಂಗವಾಗಿ ಟೀಸರ್‌ ರಿಲೀಸ್‌ ಆಗಿದೆ.

ಕಮಲ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘KH234’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಕಮಲ ಹಾಸನ್ ಅವರ 69ನೇ ಹುಟ್ಟುಹಬ್ಬದ ಮುನ್ನಾದಿನವಾದ ಇಂದು ‘KH234’ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಚಿತ್ರಕ್ಕೆ ಅಧಿಕೃತವಾಗಿ ‘Thug Life’ ಎಂದು ಹೆಸರಿಡಲಾಗಿದೆ. ಜೊತೆಗೆ ಟೀಸರ್‌ನಿಂದ ಕಮಲ್ ಅವರು ಒಂದು ವಿಭಿನ್ನ ಗ್ಯಾಂಗ್‌ಸ್ಟರ್ ಚಿತ್ರ ನೀಡಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬರುತ್ತದೆ. ಪೋಸ್ಟರ್‌ನಲ್ಲಿ ಕಮಲ್‌ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಕೇವಲ ಅವರ ಕಣ್ಣುಗಳು ಮಾತ್ರ ಗೋಚರಿಸಿವೆ. ಕಮಲ್ ಅವರ ಪಾತ್ರದ ಪರಿಚಯವನ್ನು ನೀಡುವುದರೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ.

‘ನನ್ನ ಹೆಸರು ರಂಗರಾಯ ಶಕ್ತಿವೇಲ್ ನಾಯಕರ್‌ʼ ಎಂದು ಅವರು ಹೇಳುತ್ತಾರೆ. ‘ನನಗೆ ಯಾಕುಜಾ ಎಂದು ಸಹ ಕರೆಯುತ್ತಾರೆ’. ಮುಂದುವರೆದು ಜಪಾನೀ ಪದದ ಅರ್ಥವನ್ನು ವಿವರಿಸುತ್ತಾರೆ. ‘ಇದರರ್ಥ ದರೋಡೆಕೋರ’ ಎಂದಿದ್ದಾರೆ. ಯುದ್ಧವು ಪ್ರಾರಂಭವಾದಾಗ ತಮ್ಮ ಸಮರ ಕಲೆಗಳ ಕೌಶಲ್ಯ ಪ್ರದರ್ಶಿಸಿದ್ದಾರೆ. ಅವರ ಪ್ರತಿಸ್ಪರ್ಧಿಗಳು ಕಮಲ್‌ರೊಂದಿಗೆ ಪುರಾತನ ಆಯುಧಗಳ ಮೂಲಕ ಹೋರಾಡಿದ್ದಾರೆ. ಚಿತ್ರವನ್ನು Raaj Kamal Films International, Madras Talkies ಮತ್ತು Red Giant Movies ಬ್ಯಾನರ್‌ ಅಡಿಯಲ್ಲಿ ಕಮಲ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ಅವರು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಟರಾದ ಜಯಂ ರವಿ, ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ A R ರೆಹಮಾನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here