ಬಾಲಿವುಡ್‌ನ ಖ್ಯಾತ ಫೋಟೊಗ್ರಾಫರ್ ದಬೂ ರತ್ನಾನಿ ‘ಕೆಜಿಎಫ್‌’ ಪ್ಯಾನ್ ಇಂಡಿಯಾ ಹೀರೋ ಯಶ್ ಫೋಟೋಶೂಟ್‌ ಮಾಡಿದ್ದಾರೆ. ಇದು ನಟ ಯಶ್ ಅವರ ನೂತನ ಚಿತ್ರದ ತಯಾರಿ ಎನ್ನುವುದು ಅಭಿಮಾನಿಗಳ ಊಹೆ. ಆದರೆ ಈ ಕುರಿತಾಗಿ ಯಶ್‌ ಕಡೆಯಿಂದ ಮಾತ್ರ ಯಾವುದೇ ಸುದ್ದಿ ಸಿಕ್ಕಿಲ್ಲ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್‌’ ಚಿತ್ರದೊಂದಿದೆ ಪ್ಯಾನ್ ಇಂಡಿಯಾ ಹೀರೋ ಆಗಿರುವ ಯಶ್‌ ಸುದ್ದಿಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ಫ್ಯಾಷನ್ ಫೋಟೊಗ್ರಾಫರ್‌ ದಬೂ ರತ್ನಾನಿ ಅವರು ಯಶ್ ಪೋಟೊ ಶೂಟ್ ಮಾಡಿದ್ದಾರೆ. ಫೋಟೊಶೂಟ್‌ ನಂತರದ ಯಶ್ ಮತ್ತು ದಬೂ ಜೊತೆಗಿರುವ ಫೋಟೊಗಳು ರಿಲೀಸ್ ಆಗಿವೆ. ದಬೂ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಯಶ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿರುವ ಅಭಿಮಾನಿಗಳು ಯಶ್ ನೂತನ ಸಿನಿಮಾಗೆ ಸಿದ್ಧತೆ ನಡೆಸಿರುವ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ಯಶ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

‘ಕೆಜಿಎಫ್‌- ಚಾಪ್ಟರ್‌ 1’ ಚಿತ್ರ ಶುರುವಾದಂದಿನಿಂದ ಯಶ್ ಉದ್ದನೆಯ ದಾಡಿಯಲ್ಲಿದ್ದಾರೆ. ಸಿನಿಮಾ ತೆರೆಕಂಡ ನಂತರ ದಾಡಿ ಒಂದು ಟ್ರೆಂಡ್ ಆಗಿತ್ತು. ಯಶ್ ಅಭಿಮಾನಿಗಳೇನಕರು ದಾಡಿ ಬಿಟ್ಟು ತಮ್ಮ ಹೀರೋನನ್ನು ಅನುಕರಿಸಿದ್ದರು. ರಾಕಿ ಭಾಯ್‌ ಪಾತ್ರದ ಮೂಲಕ ಯಶ್‌ ಪ್ಯಾನ್ ಇಂಡಿಯಾ ಸಿನಿಪ್ರಿಯರನ್ನು ತಲುಪಿದರು. ಇದೀಗ ಅವರ ‘ಕೆಜಿಎಫ್‌ – ಚಾಪ್ಟರ್ 2’ ಸಿನಿಮಾ ತೆರೆಗೆ ಸಿದ್ಧವಾಗಿದೆ. 2022ರ ಏಪ್ರಿಲ್‌ 14ರಂದು ಸಿನಿಮಾ ತೆರೆಕಾಣಲಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದು, ರವೀನಾ ಟಂಡನ್‌, ಪ್ರಕಾಶ್ ರೈ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶ್ರೀನಿಧಿ ಶೆಟ್ಟಿ ಸಿನಿಮಾದ ನಾಯಕಿ.

LEAVE A REPLY

Connect with

Please enter your comment!
Please enter your name here