ಕಾರ್ತೀಕ್‌ ಗಟ್ಟಂನೇನಿ ರಚಿಸಿ, ನಿರ್ದೇಶಿಸಿರುವ ‘ಈಗಲ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರವಿತೇಜಾ, ಅನುಪಮಾ ಪರಮೇಶ್ವರನ್‌, ಕಾವ್ಯಾ ಥಾಪರ್‌ ಚಿತ್ರದ ಪ್ರಮುಖ ಕಲಾವಿದರು. 2024ರ ಜನವರಿ 13ರಂದು ಸಿನಿಮಾ ತೆರೆಕಾಣಲಿದೆ.

ರವಿತೇಜಾ, ಅನುಪಮಾ ಪರಮೇಶ್ವರನ್, ಕಾವ್ಯಾ ಥಾಪರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ‘ಈಗಲ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಾರ್ತಿಕ್ ಗಟ್ಟಂನೇನಿ ರಚಿಸಿ, ನಿರ್ದೇಶಿಸಿ, ಸಂಕಲನದ ಜೊತೆಗೆ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ‘ಜ್ವಾಲಾಮುಖಿಯಿಂದ ಲಾವಾರಸ ಇಳಿಯಲು ಬಿಡಬೇಡಿ, ಅದು ಕೇವಲ ನಿಮ್ಮ ಹಳ್ಳಿಯನ್ನು ಮಾತ್ರವಲ್ಲದೆ ನಿಮ್ಮ ಅಸ್ತಿತ್ವವನ್ನೂ ಅಳಿಸಿ ಹಾಕಿಬಿಡುತ್ತದೆ’ ಎನ್ನುವ ವಾಯ್ಸ್‌ ಓವರ್‌ ಕೇಳಿಸುತ್ತದೆ. ದರೋಡೆಕೋರರು ಮತ್ತು ಪತ್ರಕರ್ತರರಿಂದ ಹಿಡಿದು ಉನ್ನತ ಶ್ರೇಣಿಯ ಅಧಿಕಾರಿಗಳವರೆಗೆ ಎಲ್ಲರೂ ‘ಈಗಲ್’ ಮೊರೆಹೋಗಿದ್ದಾರೆ. ಎಂದು ಹೀಗೆ ಇತರ ಪಾತ್ರಗಳು ರವಿತೇಜ ಅವರ ಪಾತ್ರದ ಬಗ್ಗೆ ವಿವರಣೆಯನ್ನು ನೀಡಿವೆ.

People Media Factory ಬ್ಯಾನರ್‌ ಅಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ಅವರು ಈ ಚಿತ್ರ ನಿರ್ಮಿಸಿದ್ದು, ವಿವೇಕ್‌ ಕುಚ್ಚಿಬೊಟ್ಲಾ ಸಹನಿರ್ಮಾಣವಿದೆ. ಸಿನಿಮಾದಲ್ಲಿ ನವದೀಪ್, ಶ್ರೀನಿವಾಸ್ ಅವಸರಲ, ಮಧುಬಾಲಾ ಮತ್ತು ಅಜಯ್ ಗೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬರವಣಿಗೆ ವಿಭಾಗದಲ್ಲಿ ಮಣಿಬಾಬು ಕರಣಂ, ಚೈತನ್ಯ ಪ್ರಸಾದ್, ರೆಹಮಾನ್ ಮತ್ತು ಕಲ್ಯಾಣ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಜನವರಿ 13, 2024ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here