ಪಿ ವಾಸು ನಿರ್ದೇಶನದ ಹಾರರ್‌ – ಕಾಮಿಡಿ ಸಿನಿಮಾ ‘ಚಂದ್ರಮುಖಿ 2’ ಬಿಡುಗಡೆ ದಿನಾಂಕ ಸೆಪ್ಟೆಂಬರ್‌ 28 ಎಂದು ನಿಗದಿಯಾಗಿದೆ. ರಾಘವ ಲಾರೆನ್ಸ್‌ ಮತ್ತು ಕಂಗನಾ ರನಾವತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮಿಳು ಮತ್ತು ಹಿಂದಿ ದ್ವಿಭಾಷಾ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷಿಯಿದೆ.

ನಿರ್ದೇಶಕ ಮತ್ತು ನಟ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರನಾವತ್ ನಟನೆಯ ‘ಚಂದ್ರಮುಖಿ 2’ ಸಿನಿಮಾ ಸೆಪ್ಟೆಂಬರ್‌ 19ರಂದು ತೆರೆಕಾಣಬೇಕಿತ್ತು. ರಿಲೀಸ್‌ ಮುಂದೂಡಲಾಗಿದ್ದು ಚಿತ್ರ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ. ಹಿರಿಯ ನಿರ್ದೇಶಕ ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ್ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ‘ಚಂದ್ರಮುಖಿ’ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲಿಸ್ಟ್ ಸೇರಿತ್ತು. 18 ವರ್ಷಗಳ ಬಳಿಕ ‘ಚಂದ್ರಮುಖಿ’ ಸೀಕ್ವೆಲ್ ತೆರೆಕಾಣುತ್ತಿದೆ. ಸುಭಾಷ್ ಕರಣ್ ಅವರು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ಚಿತ್ರ ನಿರ್ಮಿಸಿದ್ದಾರೆ. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಸಿನಿಮಾಗಿದೆ. ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ವಡಿವೇಲು, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here