ಕಾರ್ತೀಕ್‌ ಸುಬ್ಬರಾಜು ನಿರ್ದೇಶನದ ‘ಜಿಗರ್ತಾಂಡಾ ಡಬಲ್‌ಎಕ್ಸ್‌’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರಾಘವ ಲಾರೆನ್ಸ್‌, ಎಸ್‌ ಜೆ ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ 2014ರ ‘ಜಿಗರ್ತಾಂಡ’ ಸೀಕ್ವೆಲ್‌. ನವೆಂಬರ್‌ 10, 2023ರಂದು ಸಿನಿಮಾ ತೆರೆಕಾಣಲಿದೆ.

ರಾಘವ ಲಾರೆನ್ಸ್ ಮತ್ತು ಎಸ್‌ ಜೆ ಸೂರ್ಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಜಿಗರ್ತಾಂಡ ಡಬಲ್‌ಎಕ್ಸ್’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಕಾರ್ತೀಕ್‌ ಸುಬ್ಬರಾಜು ಈ ಸಿನಿಮಾ ನಿರ್ದೇಶಿಸಿದ್ದು, ಇವರ ಹಿಟ್ ಗ್ಯಾಂಗ್‌ಸ್ಟರ್ ಡ್ರಾಮಾ ‘ಜಿಗರ್ತಂಡ’ದ ಸೀಕ್ವೆಲ್‌ ಇದು. ಚಿತ್ರದ ಟ್ರೇಲರ್‌ 70ರ ದಶಕದಲ್ಲಿ ನಡೆಯುವ ಗ್ಯಾಂಗ್ಸ್‌ಸ್ಟರ್‌ ಕತೆ. ಒಬ್ಬ ಚಲನಚಿತ್ರ ನಿರ್ಮಾಪಕ ಮತ್ತು ಅಪಾಯಕಾರಿ ದರೋಡೆಕೋರ ಇಬ್ಬರೂ ಸೇರಿಕೊಂಡು ಪಾಶ್ಚಾತ್ಯ ಚಲನಚಿತ್ರವನ್ನು ಮಾಡಲು ಸಹಕರಿಸುವ ಕಥಾಹಂದರ. S J ಸೂರ್ಯ ಸಿನಿಮಾ ನಿರ್ಮಾಣದ ಕುರಿತು ಲಾರೆನ್ಸ್‌ ಒಬ್ಬ ದರೋಡೆಕೋರನಾಗಿ ಹೇಗೆ ಈ ಸಂಗತಿಗಳನ್ನು ನಿಭಾಯಿಸುತ್ತಾನೆ ಎಂಬುದಿದೆ.

ರಾಘವ ಲಾರೆನ್ಸ್‌ ದರೋಡೆಕಾರನಾಗಿ ಕಾಣಿಸಿಕೊಂಡಿದ್ದು, S J ಸೂರ್ಯ ಚಿತ್ರ ನಿರ್ಮಾಪಕನ ಪಾತ್ರ ನಿರ್ವಹಿಸಿದ್ದಾರೆ. Alankar Pandian of Invenio Origin ಸಹಯೋಗದಲ್ಲಿ Five Star Creations ಬ್ಯಾನರ್‌ ಅಡಿಯಲ್ಲಿ ಕಾರ್ತಿಕೇಯನ್‌ ಸಂತಾನಂ ಚಿತ್ರ ನಿರ್ಮಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿರುವ ಚಿತ್ರಕ್ಕೆ ತಿರುನಾವುಕ್ಕರಸು ಛಾಯಾಗ್ರಹಣ ಮತ್ತು ಶಫೀಕ್ ಮೊಹಮ್ಮದ್ ಅಲಿ ಸಂಕಲನವಿದೆ. ಸಿನಿಮಾವು ಮೂಲ ತಮಿಳು ಸೇರಿದಂತೆ ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಇದೇ ನವೆಂಬರ್‌ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2014ರಲ್ಲಿ ತೆರೆಕಂಡಿದ್ದ ‘ಜಿಗರ್ತಾಂಡ’ ಸಿನಿಮಾದಲ್ಲಿ ಸಿದ್ಧಾರ್ಥ್, ಬಾಬಿ ಸಿಂಹ, ಲಕ್ಷ್ಮಿ ಮೆನನ್, ಕರುಣಾಕರನ್ ಮತ್ತು ಗುರು ಸೋಮಸುಂದರಂ ನಟಿಸಿದ್ದು, ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಡಿದ್ದು ನವೆಂಬರ್‌ 10ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here