ಪ್ರತಿಷ್ಠಿತ 54ನೇ International Film Festival of India (IFFI) ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ. ಈ ವರ್ಷ ‘ಸತ್ಯಜಿತ್ ರೇ’ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಲಿವುಡ್ ಚಿತ್ರ ನಿರ್ಮಾಪಕ, ನಟ ಮೈಕೆಲ್ ಡಗ್ಲಾಸ್ ಅವರಿಗೆ ನೀಡಲಾಗುತ್ತಿದೆ. ಖ್ಯಾತ ಹಿಂದಿ ಚಿತ್ರನಿರ್ದೇಶಕ ಶೇಖರ್ ಕಪೂರ್ ಅವರು ಈ ಬಾರಿ ಅಂತರರಾಷ್ಟ್ರೀಯ ತೀರ್ಪುಗಾರರ ನೇತೃತ್ವ ವಹಿಸುತ್ತಿದ್ದಾರೆ.

54ನೇ International Film Festival of India (IFFI) ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ. ಈ ವರ್ಷ ‘ಸತ್ಯಜಿತ್ ರೇ’ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಲಿವುಡ್ ಚಿತ್ರ ನಿರ್ಮಾಪಕ, ನಟ ಮೈಕೆಲ್ ಡಗ್ಲಾಸ್ (Michael Kirk Douglas) ಅವರಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಠಾಕೂರ್‌ ಮಾತನಾಡಿರುವ ಅವರು, ‘ಚಲನಚಿತ್ರೋದ್ಯಮವು ಜಾಗತಿಕವಾಗಿ ಐದನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಮಾಧ್ಯಮ ಮತ್ತು ಮನೋರಂಜನಾ ಉದ್ಯಮವು ಹೆಚ್ಚು ಅಭಿವೃದ್ದಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮಾರುಕಟ್ಟೆಯು ಸರಾಸರಿ ವಾರ್ಷಿಕ ದರ 20% ಬೆಳೆದಿದೆ. IFFIಯ ಅಂತರರಾಷ್ಟ್ರೀಯ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ ಚಲನಚಿತ್ರಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆ ಕಂಡಿದೆ. COVID-19 ನಂತರ ಭಾರತದಲ್ಲಿ OTT ಉದ್ಯಮ ಉತ್ತಮ ಬೆಳವಣಿಗೆ ಕಂಡಿದೆ. ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ. ಈ ವಲಯವು 28% ವಾರ್ಷಿಕ ದರದಲ್ಲಿ ಬೆಳೆಯುತ್ತಿದೆ. 15 OTT ಪ್ಲಾಟ್‌ಫಾರ್ಮ್‌ಗಳಿಂದ 10 ಭಾಷೆಗಳಲ್ಲಿ ಒಟ್ಟು 32 ಕಂಟೆಂಟ್‌ಗಳನ್ನು ಸ್ವೀಕರಿಸಲಾಗಿದೆ ಮತ್ತು ಈ ಬಾರಿ ವಿಜೇತರಿಗೆ ₹10 ಲಕ್ಷ ಮೊತ್ತವನ್ನು ನೀಡಲಾಗುತ್ತದೆ’ ಎಂದಿದ್ದಾರೆ.

ಚಲನಚಿತ್ರ ವಲಯದಲ್ಲಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ದೇಶದ ದೂರದ ಮೂಲೆಗಳಿಂದ ಪ್ರತಿಭೆಗಳನ್ನು ಗುರುತಿಸಲು, ಸರ್ಕಾರವು ‘ನಾಳೆಯ ಸೃಜನಶೀಲ ಮನಸ್ಸು’ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ 600ಕ್ಕೂ ಹೆಚ್ಚು ನಮೂದುಗಳು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ. ಸಚಿವ ಎಲ್ ಮುರುಗನ್ ಮಾತನಾಡಿ, ‘IFFI ವಿಶ್ವದ ಅತಿದೊಡ್ಡ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಭ್ರಮಗಳಲ್ಲಿ ಒಂದಾಗಿದೆ. ಖ್ಯಾತ ಚಿತ್ರನಿರ್ದೇಶಕ ಶೇಖರ್ ಕಪೂರ್ ಅವರು ಈ ಬಾರಿ ಅಂತರರಾಷ್ಟ್ರೀಯ ತೀರ್ಪುಗಾರರ ನೇತೃತ್ವ ವಹಿಸುತ್ತಿದ್ದಾರೆ’ ಎಂದಿದ್ದಾರೆ. ಉತ್ಸವದಲ್ಲಿ 270ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಾಲ್ಕು ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. INOX Panjim (4), Maquinez Palace (1), INOX Porvorim (4), Z Square Samrat Ashok (2). (2). 54 ನೇ IFFI ನ ‘ಅಂತಾರಾಷ್ಟ್ರೀಯ ವಿಭಾಗ’ 198 ಚಲನಚಿತ್ರಗಳನ್ನು ಹೊಂದಿರುತ್ತದೆ, ಹಿಂದಿನ ಇವೆಂಟ್‌ಗಿಂತ ಇದು 18% ಗಿಂತ ಹೆಚ್ಚು. ಇದು 13 ವಿಶ್ವ ಪ್ರೀಮಿಯರ್‌ಗಳು, 18 ಅಂತರರಾಷ್ಟ್ರೀಯ ಪ್ರೀಮಿಯರ್‌ಗಳು, 62 ಏಷ್ಯಾ ಪ್ರೀಮಿಯರ್‌ಗಳು ಮತ್ತು 89 ಭಾರತದ ಪ್ರೀಮಿಯರ್‌ಗಳನ್ನು ಹೊಂದಿರುತ್ತದೆ. ಈ ವರ್ಷ, IFFI 105 ದೇಶಗಳಿಂದ ದಾಖಲೆಯ 2,926 ಎಂಟ್ರಿಗಳನ್ನು ಸ್ವೀಕರಿಸಿದೆ. ಇದು ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

LEAVE A REPLY

Connect with

Please enter your comment!
Please enter your name here