ರಾಜಾಕೃಷ್ಣ ಮೆನನ್ ನಿರ್ದೇಶನದ ‘ಪಿಪ್ಪಾ’ ಹಿಂದಿ ಸಿನಿಮಾ Prime Videoದಲ್ಲಿ ಸ್ಟ್ರೀಮ್ ಆಗುತ್ತಿದೆ. ಇಶಾನ್ ಕಟ್ಟೇರ್ ಮತ್ತು ಮೃಣಾಲ್ ಠಾಕೂರ್ ಮುಖ್ಯ ಪಾತ್ರಗಳಲ್ಲಿರುವ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
ಇಶಾನ್ ಕಟ್ಟೇರ್ ಮತ್ತು ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪಿಪ್ಪಾ’ ಹಿಂದಿ ಸಿನಿಮಾ ನಿನ್ನೆಯಿಂದ (ನವೆಂಬರ್ 10) Prime Videoದಲ್ಲಿ ಸ್ಟ್ರೀಮ್ ಆಗುತ್ತಿದೆ. ರಾಜಾ ಕೃಷ್ಣ ಮೆನನ್ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರವು 1971ರ ಇಂಡೋ – ಪಾಕಿಸ್ತಾನ ಯುದ್ಧದ ಸಮಯದಲ್ಲಿ ತನ್ನ ಒಡಹುಟ್ಟಿದವರ ಜೊತೆ ಹೋರಾಡಿದ ಭಾರತದ 45ನೇ ಅಶ್ವದಳದ ರೆಜಿಮೆಂಟ್ ಕ್ಯಾಪ್ಟನ್ ಬಲರಾಮ್ ಸಿಂಗ್ ಮೆಹ್ತಾ ಅವರ ನೈಜ ಕತೆ ಹೇಳಿದೆ. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವ ಯುದ್ಧದಲ್ಲಿ ಮೆಹ್ತಾ ತನ್ನನ್ನು ತಾನು ಸಾಬೀತುಪಡಿಸಲು ಹೆಜ್ಜೆ ಹಾಕುವ ಚಿತ್ರಣವನ್ನು ಈ ಸಿನಿಮಾ ಒಳಗೊಂಡಿದೆ.
ರಷ್ಯಾದ ಉಭಯಚರ ಯುದ್ಧ ಟ್ಯಾಂಕರ್ ‘PT-76’, ‘ಪಿಪ್ಪಾ’ (ತುಪ್ಪದ ಖಾಲಿ ಡಬ್ಬ- ಟಿನ್) ನೀರಿನ ಮೇಲೆ ತೇಲುವ ಈ ಯುದ್ಧದ ಟ್ಯಾಂಕರ್‌ನ ಹೆಸರನ್ನು ಚಿತ್ರದ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರವನ್ನು Prime Video ಪ್ರಸ್ತುತ ಪಡಿಸಿದ್ದು, RSVP Movies ಮತ್ತು Roy Kapur Films ನಿರ್ಮಿಸಿವೆ. ಪ್ರಿಯಾಂಶು ಪೈನ್ಯುಲಿ, ಸೋನಿ ರಜ್ದಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ A R ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.