ಜನಪ್ರಿಯ ನಿರೂಪಕ, ನಟ ಕಪಿಲ್‌ ಶರ್ಮಾ ನೆಟ್‌ಫ್ಲಿಕ್ಸ್‌ನಲ್ಲಿ ‘I Am Not Done Yet’ ಶೀರ್ಷಿಕೆಯಡಿ ತಮ್ಮ ಬದುಕಿನ ಕತೆ ಹೇಳಿಕೊಳ್ಳಲಿದ್ದಾರೆ. ಅವರದೇ ಶೈಲಿಯಲ್ಲಿ ನಿರೂಪಣೆಗೊಳ್ಳಲಿರುವ ಶೋ ಜನವರಿ 28ರಿಂದ ಸ್ಟ್ರೀಮ್‌ ಆಗಲಿದೆ.

‘ದಿ ಕಪಿಲ್‌ ಶರ್ಮಾ ಶೋ’ ಮೂಲಕ ಕಿರುತೆರೆಯ ಜನಪ್ರಿಯ ತಾರೆಯಾಗಿರುವ ನಿರೂಪಕ, ನಟ ಕಪಿಲ್‌ ಶರ್ಮಾ ನೆಟ್‌ಫ್ಲಿಕ್ಸ್‌ನ ‘I Am Not Done Yet’ ಸ್ಟ್ಯಾಂಡ್‌ಅಪ್‌ ಸ್ಪೆಷಲ್‌ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ಧಾರೆ. “ನಾನು ಸಿನಿಮಾ ಪ್ರವೇಶಿಸಿ ಇಪ್ಪತ್ತೈದು ವರ್ಷಗಳೇ ಆಗಿವೆ. ಹದಿನೈದು ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ನಾನು ಕಾಮಿಡಿಯನ್ನು ಸೀರಿಯಸ್‌ ಆಗಿ ತೆಗೆದುಕೊಂಡವನೇ ಅಲ್ಲ. ಏಕೆಂದರೆ ನಮಗೆ ಪಂಜಾಬಿಗಳಿಗೆ ಹಾಸ್ಯ ಬದುಕಿನ ಭಾಗವೇ ಆಗಿದೆ. ಹಾಸ್ಯ ಮಾಡುವುದಕ್ಕೆ ಹಣ ಕೊಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ! ನಾನಿನ್ನೂ ಹೇಳಲಿರುವುದು, ಮಾತನಾಡಲಿರುವುದು ಸಾಕಷ್ಟಿದೆ, I Am Not Done Yet” ಎಂದು ಶೋನ ಪ್ರೊಮೋಷನ್‌ ವೀಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಎಂದಿನಂತೆ ಅವರು ಸೆಟ್‌ನಲ್ಲಿರುವ ತಂತ್ರಜ್ಞರು, ಕಾರ್ಮಿಕರೊಂದಿಗಿನ ತಮಾಷೆಯೂ ರೆಕಾರ್ಡ್‌ ಆಗಿದೆ. ಕಪಿಲ್‌ ಶರ್ಮಾ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಪ್ರೊಮೋಷನ್‌ ವೀಡಿಯೋ ಹಂಚಿಕೊಂಡಿದ್ದಾರೆ.

ಕಪಿಲ್‌ ಶರ್ಮಾ ಕುರಿತ ಈ ಸ್ಪೆಷಲ್‌ ಶೋ ಕುರಿತಂತೆ ನೆಟ್‌ಫ್ಲಿಕ್ಸ್‌ ಸಿನಾಪ್ಸಿಸ್‌ ಹೀಗಿದೆ – “ಅಮೃತ್‌ಸರ್‌ ಕೆ ಗಲಿಯೋ ಸೆ ಮುಂಬಯಿ ಕೆ ಸೆಟ್ಸ್‌ ತಕ್‌, ಕಪಿಲ್‌ ಶರ್ಮಾ ನಮ್ಮನ್ನು ರಂಜಿಸುತ್ತಿದ್ದಾರೆ. ಆದರೆ ಅವರಿನ್ನೂ ಮಾತನಾಡಲಿಕ್ಕಿದೆ, I Am Not Done Yet! ನಿಮ್ಮ ನೆಚ್ಚಿನ ಕಮೆಡಿಯನ್‌ ಕಪಿಲ್‌ ನೆಟ್‌ಫ್ಲಿಕ್ಸ್‌ನ ಈ ಶೋನೊಂದಿಗೆ ಡಿಜಿಟಲ್‌ ಡೆಬ್ಯೂಟ್‌ ಮಾಡುತ್ತಿದ್ದಾರೆ. ಜನವರಿ 28ರಂದು ಶೋ ಸ್ಟ್ರೀಮ್‌ ಆಗಲಿದೆ. ಹಿಂದೆಂದೂ ನೋಡಿರದ ಕಪಿಲ್‌ರನ್ನು ನೀವಿಲ್ಲಿ ನೋಡಲಿದ್ದೀರಿ”

LEAVE A REPLY

Connect with

Please enter your comment!
Please enter your name here