ಹೇಮಂತರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ Side-B’ OTT ದಿನಾಂಕ ಘೋಷಣೆಯಾಗಿದೆ. ನವೆಂಬರ್‌ 11ರಂದು ಥಿಯೇಟರ್‌ಗೆ ಬಂದಿದ್ದ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. Amazon primeನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್‌ ಮುಖ್ಯ ಭೂಮಿಕೆಯಲ್ಲಿದ್ದ ‘ಸಪ್ತ ಸಾಗರದಾಚೆ ಎಲ್ಲೋ Side-B’ ಚಿತ್ರದ OTT ದಿನಾಂಕ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡು 30 ದಿನಗಳಾಗಿದ್ದು, Prime Videoದಲ್ಲಿ ಇದೇ ಡಿಸೆಂಬರ್‌ 22ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಹೇಮಂತ್‌ ರಾವ್‌ ಚಿತ್ರಕಥೆ ಬರೆದು, ನಿರ್ದೇಶಿಸಿದ್ದ ಈ ಸಿನಿಮಾ ನವೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಮನು ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್‌ ಕುಮಾರ್‌ ಮತ್ತು ಶರತ್ ಲೋಹಿತಾಶ್ವ, ಪವಿತ್ರ ಲೋಕೇಶ್, ರಮೇಶ್ ಇಂದಿರಾ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ Side-A ಹೊಸ ಅಲೆ ಮೂಡಿಸಿತ್ತು.

ಮೊದಲ ಭಾಗದಲ್ಲಿ ಮನು ಮತ್ತು ಪ್ರಿಯಾ ಪ್ರೀತಿಯ ಸೂಚನೆಯ ಅರ್ಥವಾಗಿತ್ತು. Side-B ಚಿತ್ರದಲ್ಲಿ ಮನು ಜೈಲಿನಿಂದ ಹೊರ ಬರುವಷ್ಟರಲ್ಲಿ ಪ್ರಿಯಾಳಿಗೆ ಮದುವೆಯಾಗಿ 7 ವರ್ಷದ ಮಗ ಸಹ ಇರುತ್ತಾನೆ. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ತೀರಾ ಕಷ್ಟದ ಜೀವನವನ್ನು ಅನುಭವಿಸುತ್ತಿರುವ ಪ್ರಿಯಾಳಿಗೆ ಮನು ಪರೋಕ್ಷವಾಗಿ ಸಹಾಯ ಮಾಡುತ್ತಾನೆ. ಹಾಡುವುದನ್ನೇ ನಿಲ್ಲಿಸಿದ್ದ ಪ್ರಿಯಾ ಮತ್ತೆ ಹಾಡುವಂತೆ ಮಾಡುತ್ತಾನೆ. ಇದರ ಮಧ್ಯೆ ಸುರಭಿ (ಚೈತ್ರಾ ಜೆ ಆಚಾರ್)‌ ಅವನ ಜೀವನ ಪ್ರವೇಶಿಸುತ್ತಾಳೆ. ಅವಳ ಬಾಲ್ಯದ ಕನಸನ್ನು ಈಡೇರಲು ಸಹ ಸಹಾಯ ಮಾಡಿದ ಮನು ತನ್ನ ಪಯಣವನ್ನು ಅಲ್ಲಿಗೆ ಕೊನೆಗೊಳಿಸುತ್ತಾನೆ. ಚಿತ್ರವನ್ನು Paramvah Pictures Production ಬ್ಯಾನರ್‌ ಅಡಿಯಲ್ಲಿ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಸುನಿಲ್ ಭಾರದ್ವಾಜ್ ಸಂಕಲನ, ಚರಣ್ ರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here