ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆ ‘ಕೈವ’ ಸಿನಿಮಾದ ವಸ್ತು. 80ರ ದಶಕದ ಕತೆ. ಜಯತೀರ್ಥ ನಿರ್ದೇಶನದಲ್ಲಿ ಧನ್ವೀರ್‌ ಹೀರೋ ಆಗಿ ನಟಿಸಿರುವ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮೇಘಾ ಶೆಟ್ಟಿ ಈ ಚಿತ್ರದ ನಾಯಕನಟಿ.

‘ಕೈವ – ಇದು ಒಬ್ಬ ವ್ಯಕ್ತಿಯ ಹೆಸರು. 1983ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕುಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ’ ಎಂದರು ನಿರ್ದೇಶಕ ಜಯತೀರ್ಥ. ‘ಬೆಲ್‌ಬಾಟಮ್‌’ ನಂತರ ಇಲ್ಲಿ ಮತ್ತೊಮ್ಮೆ ಅವರು ದಶಕಗಳ ಹಿಂದಿನ ಕತೆ ಹೇಳುತ್ತಿದ್ದಾರೆ. ಈ ಬಾರಿ ಆಕ್ಷನ್‌ – ಲವ್‌ ಸ್ಟೋರಿ. ‘ಕೈವ’ ಎಂಬತ್ತರ ದಶಕದ ಕತೆ.

ಶೀರ್ಷಿಕೆ ಪಾತ್ರದಲ್ಲಿ ಧನ್ವೀರ್‌ ನಟಿಸಿದ್ದು, ‘ಜೊತೆಜೊತೆಯಲಿ’ ಸೀರಿಯಲ್‌ ಖ್ಯಾತಿಯ ಮೇಘಾ ಶೆಟ್ಟಿ ಚಿತ್ರದ ನಾಯಕಿ. ದಿನಕರ್ ತೂಗುದೀಪ್, ರಾಘು ಶಿವಮೊಗ್ಗ ಸೇರಿದಂತೆ ಐವರು ಚಿತ್ರನಿರ್ದೇಶಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೈಸೂರಿನಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ಬೆಂಗಳೂರಿನ ತಿಗಳರಪೇಟೆಯಲ್ಲೂ ಚಿತ್ರೀಕರಣ ನಡೆಸಲಾಗಿದೆ. ‘ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರವಿದು. ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಕತೆಯನ್ನು ಜಯತೀರ್ಥ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ’ ಎನ್ನುವುದು ಹೀರೋ ಧನ್ವೀರ್‌ ಮಾತು. ರವೀಂದ್ರಕುಮಾರ್‌ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶ್ವೇತಪ್ರಿಯ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಯುವ ನಟ ಅಭಿಷೇಕ್‌ ಅಂಬರೀಶ್‌ ಟೀಸರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಹಾರೈಸಿದರು.

LEAVE A REPLY

Connect with

Please enter your comment!
Please enter your name here