ಕನ್ನಡ ಕಿರುತೆರೆಯ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳಾಗಿದ್ದ ಹಲವರು ನಟಿಸಿರುವ ‘Online ಮದುವೆ, Offline ಶೋಭನ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಬಾವಾಜಿ ನಿರ್ದೇಶನದ ಕಾಮಿಡಿ – ಫ್ಯಾಮಿಲಿ ಎಂಟರ್‌ಟೇನರ್‌ ಜಾನರ್‌ ಚಿತ್ರವಿದು. ಜಗ್ಗಪ್ಪ ಮತ್ತು ಸುಶ್ಮಿತಾ ಮುಖ್ಯಪಾತ್ರಧಾರಿಗಳು.

ಬಾವಾಜಿ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ‘Online ಮದುವೆ, Offline ಶೋಭನ’ ಕಾಮಿಡಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದು ಅವರ ಸ್ವತಂತ್ರ್ಯ ನಿರ್ದೇಶನದ ನಾಲ್ಕನೇ ಸಿನಿಮಾ. ‘ಈಗಿನ ಟ್ರೆಂಡ್‌ಗೆ ತಕ್ಕಂತೆ ಕಾಮಿಡಿ, ಫ್ಯಾಮಿಲಿ ಎಂಟರ್ ಟೈನರ್, ಕಥಾಹಂದರ ಹೊಂದಿರುವ ಚಿತ್ರವಿದು. Unlimited ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್ ಇದರಲ್ಲಿದೆ’ ಎನ್ನುತ್ತಾರವರು. ಜಗ್ಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ‘ಗಿಚ್ಚಿ ಗಿಲಿಗಿಲಿ’, ‘ಮಜಾಭಾರತ’, ‘ಕಾಮಿಡಿ ಕಿಲಾಡಿಗಳು’ ಶೋಗಳ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು, ಅತ್ತಿಬೆಲೆ, ಆನೇಕಲ್‌ನ ಸುಗ್ಗಿ ರೆಸಾರ್ಟ್‌, ಕೋರಮಂಗಲದ ಪಬ್‌ನಲ್ಲಿ ಸಿನಿಮಾ ಚಿತ್ರಿಸಿದ್ದು ಶೂಟಿಂಗ್‌ ಪೂರ್ಣಗೊಂಡಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ. ಬಾಲು ಛಾಯಾಗ್ರಹಣ, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ‘Online ಮದುವೆ, Offline ಶೋಭನ’ ಚಿತ್ರವನ್ನು ಪ್ರೇಕ್ಷಕರ ‌ಮುಂದೆ ತರುವುದು ಚಿತ್ರತಂಡದ ಯೋಜನೆ.

Previous articleOTTಗೆ ನರೇಶ್‌ – ಪವಿತ್ರಾ ‘ಮತ್ತೆ ಮದುವೆ’ | ಜೂನ್‌ 23ರಿಂದ Amazon Primeನಲ್ಲಿ ಸಿನಿಮಾ
Next articleನಿತೀಶ್‌ ತಿವಾರಿ ನಿರ್ದೇಶನದ ‘ರಾಮಾಯಣ’ | ರಾವಣನ ಪಾತ್ರದಲ್ಲಿ ಯಶ್‌!?

LEAVE A REPLY

Connect with

Please enter your comment!
Please enter your name here