ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.
ಬೆಳಗ್ಗೆ ಕೇಕ್ ತಿಂದು ರಸಪ್ರಶ್ನೆಯ ಆಟ ಆಡಿದ್ದ ಬಿಗ್‌ಬಾಸ್ ಸ್ಫರ್ಧಿಗಳಿಗೆ ಎರಡನೇ ಟಾಸ್ಕ್ ಸಖತ್ ಛಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಇದೆ. JioCinemaಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಆಟದ ರೂಪುರೇಷೆಗಳು ಜಾಹೀರಾಗಿವೆ. ಎರಡೂ ಗುಂಪಿನ ಎಲ್ಲಾ ಸದಸ್ಯರು ಕಾಲಿಗೆ ಹಗ್ಗ ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಾಲ್ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್‌ನಲ್ಲಿ ಬಾಲ್ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜಿದ್ದಾಜಿದ್ದಿಯನ್ನು ಮೀರಿ ಟಾಸ್ಕ್‌ನಲ್ಲಿ ಗೆಲ್ಲುವುದು ಯಾರು? ಇಂದು ಪ್ರಸಾರವಾಗುವ ಎಪಿಸೋಡ್‌ನಲ್ಲಿ ಅದು ಬಹಿರಂಗವಾಗಲಿದೆ.