ತೆಲುಗು ನಟ ರಾಮ್ ಚರಣ್ ತೇಜಾ ಅವರು ‘ಗೋಲ್ಡನ್ ಬಾಲಿವುಡ್ ಆಕ್ಟರ್ಸ್ ಅವಾರ್ಡ್ 2023’ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಭಾರತೀಯ ಮನೋರಂಜನಾ ವೇದಿಕೆಗಳ ಪ್ರತಿಷ್ಠಿತ ನಟನಾ ಗೌರವಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಪಾಪ್ ಗೋಲ್ಡನ್ ಅವಾರ್ಡ್ (Pop Golden) ಪ್ರಸ್ತುತ ಪಡಿಸುವ ‘ಗೋಲ್ಡನ್ ಬಾಲಿವುಡ್ ಆಕ್ಟರ್ಸ್ ಅವಾರ್ಡ್ 2023’ಗೆ ರಾಮ್ ಚರಣ್ ಆಯ್ಕೆಯಾಗಿದ್ದಾರೆ. ಮಾಹಿತಿಯನ್ನು ಪಾಪ್ ಗೋಲ್ಡನ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ‘RRR’ ಚಿತ್ರದ ಜಾಗತಿಕ ಯಶಸ್ಸಿನ ನಂತರ ರಾಮ್ ಚರಣ್ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ನಟ, ನಟಿಯನ್ನು ಗುರುತಿಸಲು ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಇದು ಆ ವರ್ಷ ಬಿಡುಗಡೆಯಾದ ಹಿಂದಿ ಚಲನಚಿತ್ರ ಅಥವಾ ಸರಣಿಯಲ್ಲಿ ಅತ್ಯುತ್ತಮ ಅಭಿನಯವನ್ನು ಗುರುತಿಸಿ ಅಭಿಮಾನಿಗಳಿಂದ ಹೆಚ್ಚು ಮತ ಪಡೆದ ಬಾಲಿವುಡ್ ತಾರೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ.
#POPGOLDENAWARDS2023 GOLDEN BOLLYWOOD ACTOR OF THE YEAR AWARD WINNER REVEALED!!
— POP GOLDEN AWARDS (@popgoldenawards) December 8, 2023
CONGRATULATIONS TO #RAMCHARAN For the well deserved honor!! pic.twitter.com/nzfZG1BxDS
ಪ್ರಶಸ್ತಿಗೆ ಆಯ್ಕೆಯಾಗುವ ನಟ, ನಟಿಯರನ್ನು ಪ್ರೇಕ್ಷಕರು ನೇರವಾಗಿ ಆಯ್ಕೆ ಮಾಡುತ್ತಾರೆ. ತಾರೆಯರ ನಟನಾ ಕೌಶಲ್ಯ ಮತ್ತು ಹೆಚ್ಚು ವೀಕ್ಷಿಸಿದ ಚಲನಚಿತ್ರ ಅಥವಾ ಸರಣಿಯ ಅಧಾರದ ಮೇಲೆ ಪ್ರೇಕ್ಷಕರು ಮತ ನೀಡುತ್ತಾರೆ. ಈ ಪ್ರಶಸ್ತಿಯು ಭಾರತದ ಜನಪ್ರಿಯ ತಾರೆಯ ಪ್ರತಿಭೆಯನ್ನು ಸತ್ಕರಿಸುತ್ತದೆ. ವಿಜೇತರನ್ನು ದೇಶದ ಅತ್ಯಂತ ಮೆಚ್ಚುಗೆ ಪಡೆದ ವರ್ಷದ ಸ್ಕ್ರೀನ್ ಐಕಾನ್ ಎಂದು ಘೋಷಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತೀಯ ಮನೋರಂಜನಾ ವೇದಿಕೆಗಳ ಪ್ರತಿಷ್ಠಿತ ನಟನಾ ಗೌರವಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ‘ಗೋಲ್ಡನ್ ಬಾಲಿವುಡ್ ಆಕ್ಟರ್ ಪ್ರಶಸ್ತಿ’ಯು ಅಭಿಮಾನಿಗಳ ಮೇಲೆ ಹೆಚ್ಚು ಪ್ರಭಾವ ಬೀರಿದ ಬಾಲಿವುಡ್ ತಾರೆ ಎಂದು ಗುರುತಿಸುತ್ತದೆ. ಈ ಪ್ರಶಸ್ತಿಗೆ ರಾಮ್ ಚರಣ್, ಅದಾ ಶರ್ಮಾ, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಅರ್ಜುನ್ ಮಾಥುರ್, ರಾಶಿ ಖನ್ನಾ, ಅಪೂರ್ವ ಅರೋರಾ, ರಿದ್ಧಿ ಡೋಗ್ರಾ, ವಿಶೇಷ್ ಬನ್ಸಲ್ ನಾಮನಿರ್ದೇಶನಗೊಂಡಿದ್ದರು.