ಮೇಘನಾ ಗುಲ್ಜಾರ್‌ ನಿರ್ದೇಶನದ ‘ಸ್ಯಾಮ್‌ ಬಹದ್ದೂರ್‌’ ಹಿಂದಿ ಬಯೋಪಿಕ್‌ ಸಿನಿಮಾ ಡಿಸೆಂಬರ್‌ 1ರಂದು ಥಿಯೇಟರ್‌ಗೆ ಬಂದಿತ್ತು. ಫೀಲ್ಡ್‌ ಮಾರ್ಷಲ್‌ ಮಾನೇಕ್‌ ಷಾ ಬದುಕು – ಸಾಧನೆ ಆಧರಿಸಿದ ಚಿತ್ರವಿದು. ವಿಕ್ಕಿ ಕೌಶಲ್‌ ಮುಖ್ಯಭೂಮಿಕಯೆಲ್ಲಿ ನಟಿಸಿದ್ದರು. ಇದೀಗ ಚಿತ್ರದ OTT ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ.

ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿರುವ ಯುದ್ದ ಕಥಾನಕ ‘ಸ್ಯಾಮ್‌ ಬಹದ್ದೂರ್‌’ ಹಿಂದಿ ಸಿನಿಮಾಗೆ OTT ದಿನಾಂಕ ನಿಗಧಿಯಾಗಿದೆ. ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಪಡೆದುಕೊಂಡಿದೆ. ಯುದ್ಧದ ಕುರಿತಾದ ಈ ಚಲನಚಿತ್ರವು ಡಿಸೆಂಬರ್ 1, 2023ರಂದು ತೆರೆಕಂಡಿತ್ತು. ದೇಶದ ಅಪ್ರತಿಮ ಸೇನಾ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್ ಷಾ ಅವರ ದೇಶಭಕ್ತಿ, ಅವರು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆ, ಶಿಸ್ತು ಮತ್ತು ತ್ಯಾಗವನ್ನು ಚಿತ್ರದಲ್ಲಿ ತೋರಿಸಲಾಗಿದೆ. 1971ರ ಭಾರತ – ಪಾಕಿಸ್ತಾನ ಯುದ್ಧದ ಸಮಯದಲ್ಲಿ ಫೀಲ್ಡ್ ಮಾರ್ಷಲ್ ಮತ್ತು ಭಾರತೀಯ ಸೇನೆಯ ಸೇನಾ ಮುಖ್ಯಸ್ಥರ ಶ್ರೇಣಿಯನ್ನು ಸಾಧಿಸಿದ ಮೊದಲ ಭಾರತೀಯ ಸೇನಾ ಅಧಿಕಾರಿ ಸ್ಯಾಮ್ ಮಾನೇಕ್ ಷಾ ಅವರ ಜೀವನವು ಈ ಚಲನಚಿತ್ರಕ್ಕೆ ಸ್ಫೂರ್ತಿದಾಯಕವಾಗಿದೆ.

ಸಿನಿಮಾಗೆ ಜೈ ಐ ಪಟೇಲ್ ಛಾಯಾಗ್ರಾಹಣ, ಮಹರ್ಷ್ ಶಾ ಸಹಾಯಕ ನಿರ್ಮಾಣ, ನಿತಿನ್ ಬೈದ್ ಸಂಕಲನವಿದೆ. ಶಂಕರ್ – ಎಹ್ಸಾನ್ – ಲಾಯ್ ಸಂಗೀತ ಸಂಯೋಜಿಸಿದ್ದು, ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ನೀರಜ್ ಕಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಗುಲ್ಜಾರ್ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿರುವ ಈ ಚಲನಚಿತ್ರವು 2024ರ ಗಣರಾಜ್ಯೋತ್ಸವದ ದಿನವಾದ ಜನವರಿ 26ರಿಂದ ZEE5ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here