ಚಿರಂಜೀವಿ ಅಭಿನಯದ ‘ಆಚಾರ್ಯ’ ತೆಲುಗು ಚಿತ್ರದಲ್ಲಿ ರಾಮ್ ಚರಣ್ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿದೆ. ಜನರಿಗಾಗಿ ಮಿಡಿಯುವ ‘ಸಿದ್ಧ’ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ. 2022ರ ಫೆಬ್ರವರಿ 4ಕ್ಕೆ ಸಿನಿಮಾ ತೆರೆಕಾಣಲಿದೆ.

ಕೊರಟಾಲ ಶಿವಾ ನಿರ್ದೇಶನದಲ್ಲಿ ಚಿರಂಜೀವಿ ನಟಿಸಿರುವ ‘ಆಚಾರ್ಯ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿನ ಚಿತ್ರದಲ್ಲಿನ ರಾಮ್ ಚರಣ್ ಪಾತ್ರ ‘ಸಿದ್ಧ’ ರಿವೀಲ್ ಆಗಿದೆ. ತನ್ನ ಜನರಿಗಾಗಿ ಕೆಲಸ ಮಾಡುವ ಮಾದರಿ ಯುವಕನ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಆತನಿಗೊಬ್ಬಳು ಪ್ರೇಯಸಿ ನೀಲಾಂಬರಿ (ಪೂಜಾ ಹೆಗ್ಡೆ) ಇದ್ದಾಳೆ. ತನ್ನ ನೆಲ, ನಾಡಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧವಿರುವ ಯುವಕನ ಪಾತ್ರ ಇದಾಗಿದ್ದು, ಖಳಪಾತ್ರದಲ್ಲಿ ಸೋನು ಸೂದ್ ಪರಿಚಯವೂ ಸಿಗುತ್ತದೆ. ಕಾಡಿನಲ್ಲಿ ನಕ್ಸಲೈಟ್‌ ಜೊತೆಗಿನ ಒಂದು ಮುಖಾಮುಖಿಯೂ ಇದೆ.

ಕೊನೆಯಲ್ಲಿನ ಒಂದು ದೃಶ್ಯ ಚಿರಂಜೀವಿ ಮತ್ತು ರಾಮ್‌ ಚರಣ್ ಅಭಿಮಾನಿಗಳಿಗೆ ಖುಷಿ ಕೊಡುವಂತಿದೆ. ಹೊಳೆಯ ಒಂದು ದಂಡೆಯಲ್ಲಿ ಚಿರಂಜೀವಿ ಮತ್ತು ರಾಮ್‌ ಚರಣ್ ಇದ್ದರೆ, ಮತ್ತೊಂದು ದಡದಲ್ಲಿ ದೊಡ್ಡ ಮತ್ತು ಚಿಕ್ಕ ಎರಡು ಚಿರತೆಗಳನ್ನು ತೋರಿಸಲಾಗಿದೆ. ಚಿರತೆಗಳ ಮೇಲಿನ ಕ್ಯಾಮೆರಾ ಪ್ಯಾನ್ ಆಗಿ ತಾರಾ ತಂದೆ – ಮಗನ ಮೇಲೆ ಬೀಳುತ್ತದೆ. ಇವರನ್ನು ಚಿರತೆಗಳಿಗೆ ಸಮೀಕರಿಸುವ ಈ ದೃಶ್ಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ರಾಮ್ ಚರಣ್ ತೇಜಾ ಮತ್ತು ನಿರಂಜನ್ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಕೊರಟಾಲ ಶಿವಾ ನಿರ್ದೇಶಿಸಿದ್ದಾರೆ. ಕಾಜಲ್ ಅಗರ್‌ವಾಲ್‌ ಚಿತ್ರದ ಮತ್ತೊಬ್ಬ ನಾಯಕನಟಿ. 2022ರ ಫೆಬ್ರವರಿ 4ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here