ನಿವಿನ್ ಪೌಲಿ ನಟನೆಯ ‘ಏಳು ಕಡಲ್ ಏಳು ಮಲೈ’ ತಮಿಳು ಸಿನಿಮಾ Rotterdam ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ರಾಮ್ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಂಜಲಿ, ಸೂರಿ ನಟಿಸಿದ್ದಾರೆ.
ರಾಮ್ ಅವರ ಬಹುನಿರೀಕ್ಷಿತ ‘ಏಳು ಕಡಲ್ ಏಳು ಮಲೈ’ (Yezhu Kadal Yezhu Malai) ತಮಿಳು ಚಲನಚಿತ್ರವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ರೋಟರ್‌ಡ್ಯಾಮ್‌ನ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ. ಚಿತ್ರದಲ್ಲಿ ನಿವೀನ್ ಪೌಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿವೀನ್ ಪೌಲಿ ಈ ಕುರಿತು ತಮ್ಮ X ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ನಮ್ಮ ‘ಏಳು ಕಡಲ್ ಏಳು ಮಲೈ’ ಸಿನಿಮಾ ಗೌರವಾನ್ವಿತ ರೋಟರ್‌ಡ್ಯಾಮ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಇದರಿಂದ ಅತ್ಯಂತ ಹೆಮ್ಮೆ, ಸಂತಸವಾಗುತ್ತಿದೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಚಿತ್ರದಲ್ಲಿ ಅಂಜಲಿ ಮತ್ತು ಸೂರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆಯಿದೆ. ಎನ್ ಕೆ ಏಕಾಂಬರಂ ಛಾಯಾಗ್ರಹಣ, ಮತಿ ವಿ ಎಸ್ ಸಂಕಲನ, ಉಮೇಶ್ ಜೆ ಕುಮಾರ್ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. V House Productions ಬ್ಯಾನರ್ ಅಡಿಯಲ್ಲಿ ಸುರೇಶ್ ಕಾಮಚ್ಚಿ ಚಿತ್ರ ನಿರ್ಮಿಸಿದ್ದಾರೆ. ಈ ಹಿಂದೆ ‘ಕಟ್ರಧು ತಮಿಳ್’ ರೊಮ್ಯಾಂಟಿಕ್ ಚಿತ್ರ ನಿರ್ದೇಶಿಸಿದ್ದ ರಾಮ್, ಈ ಕಥೆಯೊಂದಿಗೆ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
A feeling of immense pride and joy!
— Nivin Pauly (@NivinOfficial) December 18, 2023
Our prestigious venture and Director Ram’s unparalleled creation #YezhuKadalYezhuMalai is officially selected at the esteemed International Film Festival Rotterdam under the Big Screen Competition category.
Yes! The World Premiere is @IFFR.… pic.twitter.com/zQCsqr7R17