2018ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ’96’ ತಮಿಳು ಸಿನಿಮಾ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಮರುಬಿಡುಗಡೆಯಾಗುತ್ತಿದೆ. ವಿಜಯ್‌ ಸೇತುಪತಿ ಮತ್ತು ತ್ರಿಶಾ ನಟನೆಯ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರ ’99’ ಶೀರ್ಷಿಕೆಯಡಿ ಕನ್ನಡಕ್ಕೆ ರೀಮೇಕ್‌ ಆಗಿತ್ತು. ಕನ್ನಡ ಅವತರಣಿಕೆಯಲ್ಲಿ ಗಣೇಶ್‌ ಮತ್ತು ಭಾವನಾ ನಟಿಸಿದ್ದರು.

ಪ್ರೇಮಿಗಳ ದಿನದ ವಿಶೇಷವಾಗಿ ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ ’96’ ತಮಿಳು ಸಿನಿಮಾ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಚಿತ್ರವನ್ನು ಪ್ರೇಮ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾ 2018ರಲ್ಲಿ ತೆರೆಕಂಡಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಎರಡು ದಶಕಗಳ ನಂತರ ಪರಸ್ಪರ ಭೇಟಿಯಾಗುವ 1996ರ ಬ್ಯಾಚ್‌ನ ಇಬ್ಬರು ವಿದ್ಯಾರ್ಥಿಗಳ ಸುತ್ತ ಚಿತ್ರಕಥೆ ಸುತ್ತುತ್ತದೆ. ಈ ಇಬ್ಬರು ತಮ್ಮ ಶಾಲಾ ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದರೂ ಸಹ ಪ್ರೇಮ ನಿವೇದನೆ ಮಾಡಿಕೊಳ್ಳದೇ ಇರುವುದರಿಂದ ತ್ರಿಶಾ ಬೇರೊಬ್ಬರನ್ನು ವಿವಾಹವಾಗಿ ವಿದೇಶಲ್ಲಿರುತ್ತಾಳೆ. ಶಾಲೆಯ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸಿದ ತ್ರಿಶಾಗೆ ಮುಂಜಾನೆ ಪ್ಲೈಟ್‌ ಟಿಕೆಟ್‌ ಬುಕ್‌ ಆಗಿರುತ್ತದೆ. ಈ ಸಮಯದ ಮಧ್ಯೆ ಅವರು ತಮ್ಮ ಸಂಪೂರ್ಣ ಬಾಲ್ಯ, ಶಾಲಾ, ಕಾಲೇಜಿನಲ್ಲಿ ನಡೆದ ಹಾಗೂ ವಿಜಯ್‌, ತ್ರಿಶಾಳನ್ನು ಪ್ರೀತಿಸಿ ಅದನ್ನು ಹೇಳಿಕೊಳ್ಳಲಾಗದೇ ಚಡಪಡಿಸಿದ ಎಲ್ಲಾ ಘಟನೆಗಳನ್ನು ಮೆಲುಕು ಹಾಕುತ್ತಾರೆ.

ಚಿತ್ರವು ಬಿಡುಗಡೆಯಾದ ಮೇಲೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಮೆಚ್ಚುಗೆ ಪಡೆದುಕೊಂಡಿತು. ಚಿತ್ರದಲ್ಲಿ ಆದಿತ್ಯ ಭಾಸ್ಕರ್ ಮತ್ತು ಗೌರಿ ಜಿ ಕಿಶನ್, ಭಗವತಿ ಪೆರುಮಾಳ್, ದೇವದರ್ಶಿನಿ ಮತ್ತು ಆಡುಕಳಂ ಮುರುಗದಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೆಬ್ರವರಿ 14ರಂದು ಚೆನ್ನೈನ ಕಮಲಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಟಿಕೆಟ್‌ಗಳನ್ನು 96 ರೂಪಾಯಿಗೆ ನೀಡಲಾಗುತ್ತಿದೆ. ಚಿತ್ರಕ್ಕೆ ಮಹೇಂದ್ರನ್ ಜಯರಾಜು ಮತ್ತು ಎನ್ ಷಣ್ಮುಗ ಸುಂದರಂ ಛಾಯಾಗ್ರಹಣ ಮಾಡಿದ್ದು, ಆರ್ ಗೋವಿಂದರಾಜು ಅವರ ಸಂಕಲನವಿದೆ. ಗೋವಿಂದ್ ವಸಂತ ಸಂಗೀತ ಸಂಯೋಜಿಸಿದ್ದಾರೆ. ಚಿನ್ಮಯಿ ಶ್ರೀಪಾದ ಮತ್ತು ಗೋವಿಂದ್ ವಸಂತ ಮತ್ತು ಕಾರ್ತಿಕ್ ನೇತಾ ಬರೆದಿರುವ ‘ಕಾದಲೇ ಕಾದಲೇ’ ಹಾಡು ’96’ ಆಲ್ಬಂನ ಹಿಟ್ ಹಾಡುಗಳಲ್ಲೊಂದು. ಚಲನಚಿತ್ರವು SonyLIV ಮತ್ತು Sun NXT ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಿಮೇಕ್‌ ಮಾಡಲಾಗಿದ್ದು, ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ’99’ ಶೀರ್ಷಿಕೆ ಇಡಲಾಗಿತ್ತು. ಈ ಚಿತ್ರದಲ್ಲಿ ಗಣೇಶ್‌ ಮತ್ತು ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ‘ಜಾನು’ ಶೀರ್ಷಿಕೆಯಲ್ಲಿ ಪ್ರೇಮ್ ಕುಮಾರ್ ರಿಮೇಕ್ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here