2024ರ ಸಾಲಿನ 96ನೇ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿವೆ. ‘ಓಪನ್ಹೈಮರ್’ ಚಲನಚಿತ್ರ ದಾಖಲೆಯ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಡಾರ್ಕ್ ಕಾಮಿಡಿ ‘ಪೂರ್ ಥಿಂಗ್ಸ್’ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂದು (ಮಾರ್ಚ್‌ 11) ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಫಲಕ ನೀಡಲಾಗಿದೆ.

ಹಾಲಿವುಡ್ ಪ್ರಸ್ತುತ ಪಡಿಸುವ ಬಹುನಿರೀಕ್ಷಿತ 2024ರ ಆಸ್ಕರ್‌ ಪ್ರಶಸ್ತಿಗಳು ಪ್ರಕಟವಾಗಿವೆ. ಕ್ರಿಸ್ಟೋಫರ್ ನೋಲನ್ ಅವರ ಪರಮಾಣು ಬಾಂಬ್ ಕಥಾನಕ ‘ಓಪನ್ಹೈಮರ್’ ಚಲನಚಿತ್ರ ದಾಖಲೆಯ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಡಾರ್ಕ್ ಕಾಮಿಡಿ ‘ಪೂರ್ ಥಿಂಗ್ಸ್’ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂದು (ಮಾರ್ಚ್‌ 11) ಲಾಸ್‌ ಏಂಜಲೀಸ್‌ನಲ್ಲಿ ನಡೆದ 96ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿರುವ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್‌’ ಸಂಸ್ಥೆಯಿಂದ ವಾರ್ಷಿಕವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ

ಅತ್ಯುತ್ತಮ ಚಿತ್ರ | ‘ಓಪನ್ಹೈಮರ್’ (ಕ್ರಿಸ್ಟೋಫರ್ ನೋಲನ್ ನಿರ್ದೇಶನ)
ಅತ್ಯುತ್ತಮ ನಿರ್ದೇಶಕ | ಕ್ರಿಸ್ಟೋಫರ್ ನೋಲನ್ (ಓಪನ್ಹೈಮರ್)
ಅತ್ಯುತ್ತಮ ನಟ | ಸಿಲಿಯನ್ ಮರ್ಫಿ (ಓಪನ್ಹೈಮರ್)
ಅತ್ಯುತ್ತಮ ನಟಿ | ಎಮ್ಮಾ ಸ್ಟೋನ್ (ಪೂರ್‌ ಥಿಂಗ್ಸ್)
ಅತ್ಯುತ್ತಮ ಪೋಷಕ ನಟ | ರಾಬರ್ಟ್ ಡೌನಿ ಜೂನಿಯರ್ (ಓಪನ್ಹೈಮರ್)
ಅತ್ಯುತ್ತಮ ಪೋಷಕ ನಟಿ | ಡೇವಿನ್ ಜಾಯ್ ರಾಂಡೋಲ್ಫ್ (ಹೋಲ್ಡೋವರ್ಸ್)

ಅತ್ಯುತ್ತಮ original score (ಸಂಗೀತ) | ಓಪನ್ಹೈಮರ್
ಅತ್ಯುತ್ತಮ ಮೂಲ ಚಿತ್ರಕಥೆ | ಅನಾಟಮಿ ಆಫ್ ಎ ಫಾಲ್
ಅತ್ಯುತ್ತಮ adapted screenplay | ಅಮೇರಿಕನ್ ಫಿಕ್ಷನ್ (2001ರಲ್ಲಿ ಪ್ರಕಟಗೊಂಡ ಕಾದಂಬರಿ ‘ಎರೇಸರ್’ ಆಧರಿಸಿದೆ. ಇದನ್ನು ಪರ್ಸಿವಲ್ ಎವೆರೆಟ್‌ ರಚಿಸಿದ್ದಾರೆ)
ಅತ್ಯುತ್ತಮ ಮೂಲ ಗೀತೆ | ‘ವಾಟ್‌ ವಾಸ್ ಐ ಮೇಡ್ ಫಾರ್?’ (‘ಬಾರ್ಬಿ’ ಬಿಲ್ಲಿ ಎಲಿಶ್, ಫಿನ್ನಿಯಾಸ್ ಒ’ಕಾನ್ನೆಲ್)

ಅತ್ಯುತ್ತಮ ಅಂತರರಾಷ್ಟ್ರೀಯ ವಿಶಿಷ್ಟ ಚಲನಚಿತ್ರ | ‘ದಿ ಜೋನ್‌ ಆಫ್‌ ಇಂಟ್ರೆಸ್ಟ್‌’ (ಜೊನಾಥನ್ ಗ್ಲೇಜರ್ ನಿರ್ದೇಶನ)
ಅತ್ಯುತ್ತಮ ಆನಿಮೇಟೆಡ್ ವಿಶಿಷ್ಟ ಚಲನಚಿತ್ರ | ‘ದಿ ಬಾಯ್ ಅಂಡ್ ದಿ ಹೆರಾನ್‌’
ಅತ್ಯುತ್ತಮ ವಿಶಿಷ್ಟ ಸಾಕ್ಷ್ಯಚಿತ್ರ | ’20 ಡೇಸ್ ಇನ್ ಮರಿಯುಪೋಲ್’ (ಮಿಸ್ಟಿಸ್ಲಾವ್ ಚೆರ್ನೋವ್ ನಿರ್ದೇಶನ)
ಅತ್ಯುತ್ತಮ ವಸ್ತ್ರ ವಿನ್ಯಾಸ, ಮೇಕಪ್ ಮತ್ತು ಕೇಶವಿನ್ಯಾಸ | ಪೂರ್ ಥಿಂಗ್ಸ್
ಅತ್ಯುತ್ತಮ ನಿರ್ಮಾಣ ವಿನ್ಯಾಸ | ಪೂರ್‌ ಥಿಂಗ್ಸ್‌

ಅತ್ಯುತ್ತಮ ಧ್ವನಿ ವಿನ್ಯಾಸ | ಜೋನ್‌ ಆಫ್‌ ಇಂಟ್ರೆಸ್ಟ್
ಅತ್ಯುತ್ತಮ ಸಂಕಲನ, ಛಾಯಾಗ್ರಹಣ | ಓಪನ್ಹೈಮರ್
ಅತ್ಯುತ್ತಮ ದೃಶ್ಯ ಪರಿಣಾಮ | ಗಾಡ್ಜಿಲ್ಲಾ ಮೈನಸ್ ಒನ್ (ತಕಾಶಿ ಯಮಝಕಿ ನಿರ್ದೇಶನ)
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ | ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ರಿ ಶುಗರ್ (ವೆಸ್ ಆಂಡರ್ಸನ್ ನಿರ್ದೇಶನ)
ಅತ್ಯುತ್ತಮ ಆನಿಮೇಟೆಡ್ ಕಿರುಚಿತ್ರ | ವಾರ್‌ ಈಸ್‌ ಓವರ್‌-ಇನ್ಸ್ಪೈರ್ಯಡ್‌ ಬೈ ಜಾನ್ ಅಂಡ್ ಯೋಕೊ‌ ಮ್ಯೂಸಿಕ್
ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ | ದಿ ಲಾಸ್ಟ್ ರಿಪೇರಿ ಶಾಪ್ (ಬೆನ್ ಪ್ರೌಡ್‌ಫೂಟ್ ಮತ್ತು ಕ್ರಿಸ್ ಬೋವರ್ಸ್ ನಿರ್ದೇಶನ)

ಈ ಸಮಾರಂಭದಲ್ಲಿ ವಿಶೇಷ ಪ್ರತಿಭೆಗಳು ಮತ್ತು ವಿಭಾಗಗಳನ್ನು ಗುರುತಿಸಿ ಗೌರವಿಸಲಾಗುತ್ತದೆ. ವಿಶ್ವಾದಾದ್ಯಂತ ಪ್ರತಿ ವರ್ಷ ಜರುಗುವ ಅತ್ಯಂತ ಹಳೆಯ ಪ್ರತಿಷ್ಠಿತ ಮನೋರಂಜನಾ ಕಾರ್ಯಕ್ರಮ ಇದಾಗಿದ್ದು, ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುತ್ತದೆ. ಮೊದಲ ಅಕಾಡೆಮಿ ಪ್ರಶಸ್ತಿಗಳನ್ನು 1929ರಲ್ಲಿ ಪ್ರಾರಂಭಿಸಲಾಯಿತು. 1930ರಲ್ಲಿ ನಡೆದ ಎರಡನೇ ಸಮಾರಂಭವು ರೇಡಿಯೋದಲ್ಲಿ ಮೊದಲ ಬಾರಿಗೆ ಪ್ರಸಾರವಾಯಿತು ಮತ್ತು 1953ರಲ್ಲಿ ನಡೆದ ಸಮಾರಂಭವು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಪ್ರಶಸ್ತಿ ಸಮಾರಂಭವಾಗಿದೆ.

LEAVE A REPLY

Connect with

Please enter your comment!
Please enter your name here