ಬಹುಭಾಷಾ ನಟ ಡೇನಿಯಲ್ ಬಾಲಾಜಿ ನಿನ್ನೆ (ಮಾರ್ಚ್ 29) ರಾತ್ರಿ ನಿಧನರಾಗಿದ್ದಾರೆ. ಪ್ರಮುಖವಾಗಿ ತಮಿಳು ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಕಿರಾತಕ’, ‘ಶಿವಾಜಿನಗರ’, ‘ಡವ್’, ‘ಬೆಂಗಳೂರು ಅಂಡರ್‌ವರ್ಲ್ಡ್’ ಅವರು ನಟಿಸಿರುವ ಕನ್ನಡ ಸಿನಿಮಾಗಳು.
ಬಹುಭಾಷಾ ನಟ ಡೇನಿಯಲ್ ಬಾಲಾಜಿ (48 ವರ್ಷ) ನಿನ್ನೆ (ಮಾರ್ಚ್ 29) ರಾತ್ರಿ ಹೃದಯಾಘಾತದಿಂದ ಅಗಲಿದ್ದಾರೆ. ಪ್ರಮುಖವಾಗಿ ತಮಿಳು ಸಿನಿಮಾ ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಸಿದ್ದಲಿಂಗಯ್ಯ ಅವರ ಹತ್ತಿರದ ಸಂಬಂಧಿ ಡೇನಿಯಲ್ ಬಾಲಾಜಿ. ಚೆನ್ನೈನಲ್ಲಿ ಜನಿಸಿದ ಬಾಲಾಜಿ ಅಲ್ಲಿನ ತಾರಾಮಣಿ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತರು. ಯೂನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಿನಿಮಾರಂಗಕ್ಕೆ ಪರಿಚಯವಾದರು. ‘ಚಿತ್ತಿ’ ತಮಿಳು ಸೀರಿಯಲ್‌ನಲ್ಲಿ ಡೇನಿಯಲ್ ಪಾತ್ರ ನಿರ್ವಹಿಸಿದ ಅವರಿಗೆ ಈ ಪಾತ್ರ ಹೆಸರು ತಂದುಕೊಟ್ಟಿತು. ಮುಂದೆ ಅವರ ಹೆಸರಿನ ಹಿಂದೆ ‘ಡೇನಿಯಲ್’ ಸೇರಿಕೊಂಡಿತು. ‘ಏಪ್ರಿಲ್ ಮಾಧಥಿಲ್’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರಿಗೆ ಸೂರ್ಯ ನಟನೆಯ ‘ಕಾಕಾ ಕಾಕಾ’, ‘ಪೊಲ್ಲಾಧವನ್’, ‘ವೆಟ್ಟೈಯಾಡು ವಿಲೈಯಾದು’ ಯಶಸ್ವೀ ಸಿನಿಮಾಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟವು. ‘ಕಿರಾತಕ’, ‘ಶಿವಾಜಿನಗರ’, ‘ಡವ್’, ‘ಬೆಂಗಳೂರು ಅಂಡರ್‌ವರ್ಲ್ಡ್’ ಅವರು ನಟಿಸಿರುವ ಕನ್ನಡ ಸಿನಿಮಾಗಳು. ಡೇನಿಯಲ್ ಬಾಲಾಜಿ ನಿಧನಕ್ಕೆ ತಮಿಳು ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.