ಭಾರತದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಇರುವ ಜಾಹೀರಾತು ನ್ಯೂಯಾರ್ಕ್‌ ನಗರದ ಟೈಮ್‌ಸ್ಕ್ವಯರ್‌ ಬಿಲ್‌ಬೋರ್ಡ್‌ ಮೇಲೆ ಮೂಡಿದೆ. ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್‌ ಸ್ಕ್ವಯರ್‌ ಬಿಲ್‌ಬೋರ್ಡ್‌ ಮೇಲೆ ಭಾರತದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರ ಫೋಟೊ ಮೂಡಿದೆ. ಇದು ಸ್ಪೂಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್‌ ಸರ್ವೀಸ್‌ ಜೊತೆಗಿನ ಇಳಯರಾಜಾ ಅವರ ಕೊಲ್ಯಾಬರೇಷನ್‌ ಪ್ರೊಮೋಷನಲ್ ಕ್ಯಾಂಪೇನ್‌ನ ಭಾಗ. ಇತ್ತೀಚೆಗಷ್ಟೇ ಅವರ ಸಂಯೋಜನೆಯ ಹಾಡುಗಳ ಪ್ರೊಮೋಷನ್‌ ಸಲುವಾಗಿ ಸ್ಪೂಟಿಫೈ ಮೂರು ನಿಮಿಷಗಳ ವೀಡಿಯೋ ರೂಪಿಸಿತ್ತು. ಈ ಪ್ರೊಮೋಷನ್‌ ಭಾಗವಾಗಿ ಇಳಯರಾಜಾ ಅವರ ಬ್ಯಾನರ್‌, ವೀಡಿಯೊ ಟೈಮ್ಸ್‌ಸ್ಕ್ವಯರ್‌ ಮೇಲೆ ಮೂಡಿದೆ. ಇಳಯರಾಜಾ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊ, ವೀಡಿಯೋಗಳನ್ನು ಹಂಚಿಕೊಂಡು ಅಭಿನಂದನೆ ಹೇಳಿದ್ದಾರೆ. ವಸ್ತ್ರವಿನ್ಯಾಸಕ ವಾಸುಕಿ ಭಾಸ್ಕರ್‌, “ಅವರು ಯಾವಾಗಲೂ ಸದಾ ಮಾದರಿಯಾಗಿರುತ್ತಾರೆ. ಟೈಮ್ಸ್‌ಸ್ಕ್ವಯರ್ ಮೇಲೆ ಅವರ ಫೋಟೊ ನೋಡುವಾಗ ಹೆಮ್ಮೆ ಎನಿಸುತ್ತದೆ” ಎಂದು ಇಳಯರಾಜಾ ವೀಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here