ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಅಜಿತ್‌ ಅವರ ‘ವಲಿಮೈ’ ತಮಿಳು ಸಿನಿಮಾ ಓಟಿಟಿಗೆ ಬರುತ್ತಿದೆ. ಬೋನಿ ಕಪೂರ್‌ ನಿರ್ಮಾಣ, ಎಚ್‌.ವಿನೋದ್‌ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡ ನಟ ಅಚ್ಯುತ್‌ ಕುಮಾರ್‌ ನಟಿಸಿದ್ದಾರೆ.

ಅಜಿತ್ ನಟನೆಯ ಯಶಸ್ವೀ ಆಕ್ಷನ್ – ಥ್ರಿಲ್ಲರ್ ‘ವಲಿಮೈ’ ಸಿನಿಮಾ ZEE5ನಲ್ಲಿ ಮಾರ್ಚ್‌ 25ರಿಂದ ಸ್ಟ್ರೀಮ್‌ ಆಗಲಿದೆ. ಕಳೆದ ತಿಂಗಳು ಫೆಬ್ರವರಿ 25ರಂದು ಐದು ಭಾಷೆಗಳಲ್ಲಿ ಥಿಯೇಟರ್‌ಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಜಿತ್ ಆಕ್ಷನ್, ಬೈಕ್ ಸ್ಟಂಟ್‌ಗಳಿಗೆ ಅವರ ಅಭಿಮಾನಿಗಳು ಥ್ರಿಲ್‌ ಆಗಿದ್ದರು. ಇದೀಗ ಸಿನಿಮಾ ZEE5ನಲ್ಲಿ ಪ್ರೀಮಿಯರ್‌ ಆಗಲಿದೆ. ಎಚ್‌.ವಿನೋದ್‌ ನಿರ್ದೇಶನದ ‘ವಲಿಮೈ’ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿದ್ದಾರೆ. ಬೋನಿ ಕಪೂರ್ ನಿರ್ಮಾಣದ ದುಬಾರಿ ಬಜೆಟ್‌ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಹ್ಯೂಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಇದ್ದಾರೆ.

ZEE5 ಓಟಿಟಿಯಲ್ಲಿ ‘ವಲಿಮೈ’ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಅದ್ಧೂರಿ ಪ್ರಮೋಷನ್ ಹಮ್ಮಿಕೊಂಡಿದೆ. ಹತ್ತು ಸಾವಿರ ಚದರ ಅಡಿಯಲ್ಲಿ ಸಿನಿಮಾದ ಪೋಸ್ಟರ್‌ವೊಂದನ್ನು ZEE5 ಬಿಡುಗಡೆ ಮಾಡಿ ಚಿತ್ರರಸಿರಕನ್ನು ಆಕರ್ಷಿಸುತ್ತಿದೆ. ಭಾರತೀಯ ಸಿನಿಮಾರಂಗದಲ್ಲಿ ಈವರೆಗೆ ಇಷ್ಟು ದೊಡ್ಡ ಪೋಸ್ಟರ್ ಅನ್ನು ಯಾರು ರೂಪಿಸಿಲ್ಲ. ZEE5 ಇಂತಹ ವಿಶೇಷ ಪ್ರಯತ್ನದೊಂದಿಗೆ ಗಮನಸೆಳೆದಿದೆ.

LEAVE A REPLY

Connect with

Please enter your comment!
Please enter your name here