ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ ಜೋಡಿಯ ‘ಬಂಟಿ ಔರ್‌ ಬಬ್ಲಿ 2′ ಟೀಸರ್ ಬಿಡುಗಡೆಯಾಗಿದೆ. ವರುಣ್ ಶರ್ಮಾ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ಮತ್ತೊಂದು ಬಂಟಿ ಔರ್ ಬಬ್ಲಿ ಜೋಡಿ ಇದೆ ಎನ್ನುವುದು ವಿಶೇಷ.

ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್‌ರಾಜ್ ಫಿಲ್ಮ್ಸ್‌ ಹದಿನಾರು ವರ್ಷಗಳ ಹಿಂದೆ ‘ಬಂಟಿ ಔರ್ ಬಬ್ಲಿ’ ಹಿಂದಿ ಸಿನಿಮಾ ನಿರ್ಮಿಸಿತ್ತು. ಈಗ ವರುಣ್ ಶರ್ಮಾ ನಿರ್ದೇಶನದಲ್ಲಿ ಚಿತ್ರದ ಸೀಕ್ವೆಲ್ ತಯಾರಾಗಿದೆ. ‘ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ನಟಿಸಿದ್ದರು. ಸೀಕ್ವೆಲ್‌ನಲ್ಲಿ ಅಭಿಷೇಕ್‌ ಜಾಗಕ್ಕೆ ಸೈಫ್ ಅಲಿ ಖಾನ್ ಬಂದಿದ್ದಾರೆ. ಅಲ್ಲದೆ ಈ ಸೀನಿಯರ್‌ ಜೋಡಿಯ ಜೊತೆ ಜ್ಯೂನಿಯರ್ ಜೋಡಿಯಾಗಿ ಸಿದ್ಧಾಂತ್ ಚತುರ್ವೇದಿ ಮತ್ತು ಶಾರ್ವರಿ ನಟಿಸಿದ್ದಾರೆ. ಯುವ ಜೋಡಿ ತಮ್ಮ ಚಿತ್ರದಲ್ಲಿ ಇರುವುದು ಸೀನಿಯರ್‌ಗಳಿಗೆ ಇಷ್ಟವಿಲ್ಲ ಎನ್ನುವಂತಹ ತಮಾಷೆ ಟ್ರೈಲರ್‌ನಲ್ಲಿ ಸೃಷ್ಟಿಯಾಗಿದೆ.

ಇನ್ನು ಈ ಚಿತ್ರದೊಂದಿಗೆ ಹನ್ನೆರೆಡು ವರ್ಷಗಳ ನಂತರ ರಾಣಿ ಮುಖರ್ಜಿ ಮತ್ತು ಸೈಫ್ ಅಲಿ ಖಾನ್‌ ಜೊತೆಯಾಗಿ ನಟಿಸಿದಂತಾಗಿದೆ. ಹಿಂದೆ ಈ ಜೋಡಿ ‘ಹಮ್ ತುಮ್‌’, ‘ತೇರಾ ರಂಪಂ’, ‘ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್‌’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಟ್ರೈಲರ್‌ನಲ್ಲಿ ರಾಣಿ ಮತ್ತು ಸೈಫ್‌, ‘ಸಿನಿಮಾದಲ್ಲಿ ಈ ಹೊಸ ಜೋಡಿ ಏಕಿದೆ? ಎಂದು ನಿರ್ದೇಶಕರನ್ನು ಕೇಳುತ್ತಾರೆ. “ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಸ್ಕ್ರಿಪ್ಟ್ ಬದಲಿಸುವಂತೆ ಹೇಳಿದ್ದಾರೆ” ಎನ್ನುವ ನಿರ್ದೇಶಕರ ಉತ್ತರಕ್ಕೆ ಇವರಿಬ್ಬರೂ ಕೋಪ ಮಾಡಿಕೊಳ್ಳುವುದು ಟ್ರೈಲರ್ ಮೇಕಿಂಗ್‌ನಲ್ಲಿ ಹೊಸರೀತಿಯ ಆಲೋಚನೆ. ನವೆಂಬರ್‌ 19ರಂದು ಸಿನಿಮಾ ತೆರೆಕಾಣಲಿದೆ.

Previous articleಶೂಟಿಂಗ್ ಮುಗಿಸಿದ ‘ಗಾಳಿಪಟ 2’; ಫೋಟೊ ಶೇರ್ ಮಾಡಿದ ಯೋಗರಾಜ್ ಭಟ್ರು
Next articleರತ್ನನ ಗೋಜಲು ಪ್ರಪಂಚ

LEAVE A REPLY

Connect with

Please enter your comment!
Please enter your name here