‘ಜನಗಣಮನ’ ಸಿನಿಮಾ ಖ್ಯಾತಿಯ ನಟಿ  ಆಯೇಷಾ ‘ಖಲಾಸ್‌’ ಚಿತ್ರದಲ್ಲಿ ಮತ್ತೊಮ್ಮೆ ಖಾಕಿ ತೊಟ್ಟು ಅಭಿನಯಿಸುತ್ತಿದ್ದಾರೆ. ಶಶಿಕಾಂತ್ ಆನೇಕಲ್ ನಿರ್ದೇಶನದ ಪೊಲಿಟಿಕಲ್ ಡ್ರಾಮಾ ಇದು.

ಮೂರು ವರ್ಷದ ಹಿಂದೆ ತೆರೆಕಂಡಿದ್ದ ‘ಜನಗಣಮನ’ ಚಿತ್ರದಲ್ಲಿ ನಟಿ ಆಯೇಷಾ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದರು. ಈ ಚಿತ್ರ ನಿರ್ದೇಶಿಸಿದ್ದ ಶಶಿಕಾಂತ್ ಆನೇಕಲ್‌ ಅವರೇ ‘ಖಲ್ಲಾಸ್‌’ ಸಿನಿಮಾ ಕೈಗೆತ್ತಿಕೊಂಡಿದ್ದು, ಆಯೇಷಾ ಇಲ್ಲಿ ಮತ್ತೆ ಖಾಕಿ ತೊಟ್ಟಿದ್ದಾರೆ. ತೆಲುಗಿನ ಬೋಯಪಾಟಿ ಸುಬ್ಬರಾವ್ ನಿರ್ಮಿಸುತ್ತಿರುವ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. “ಮತ್ತೆ ಖಾಕಿ ತೊಟ್ಟು ಆಕ್ಷನ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ. ದುಷ್ಟ ರಾಜಕಾರಣಿಯನ್ನು ಸರಿದಾರಿಗೆ ತಂದು ಸಮಾಜಕ್ಕೆ ಒಳಿತು ಮಾಡುವ ದಿಟ್ಟ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದೇನೆ” ಎನ್ನುತ್ತಾರೆ ನಟಿ ಆಯೇಷಾ.

ಬರಹಗಾರನಾಗಿ ಸಿನಿಮಾರಂಗ ಪ್ರವೇಶಿಸಿದ ಶಶಿಕಾಂತ್ ಆನೇಕಲ್‌ ಅವರು ‘ಜನಗಣಮನ’ ಚಿತ್ರದೊಂದಿಗೆ ನಿರ್ದೇಶಕರಾದವರು. ಕನ್ನಡದಲ್ಲಿ ತೆರೆಕಂಡ ನಂತರ ಈ ಸಿನಿಮಾ ಇತರೆ ಕೆಲವು ಭಾಷೆಗಳಿಗೆ ಡಬ್ ಆಗಿ ಹೆಸರು ಮಾಡಿತು. ‘ಖಲಾಸ್’ ನನ್ನ ನಿರ್ದೇಶನದ ಎರಡನೇ ಚಿತ್ರ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಯ ನಡುವೆ ನಡೆಯುವ ಸಂಘರ್ಷವೇ ಕಥಾಹಂದರ. ರೌಡಿಗಳನ್ನು ಬೆಳೆಸುವುದು ತನ್ನ ಜೀವನ ಎಂದು ರಾಜಕಾರಣಿ ಹೇಳಿದ್ದರೆ, ಅಂತಹ ರೌಡಿಗಳನ್ನು ಮಟ್ಟ ಹಾಕುವುದೇ ತನ್ನ ಜೀವನ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಸಮಾಜಕ್ಕೆ ಒಂದೊಳ್ಳೆಯ ಸಂದೇಶ ದಾಟಿಸುವ ಪ್ರಯತ್ನ ನಮ್ಮದು” ಎನ್ನುತ್ತಾರೆ ನಿರ್ದೇಶಕ ಶಶಿಕಾಂತ್‌. ‘ಖಲ್ಲಾಸ್‌’ ಚಿತ್ರಕ್ಕೆ ‘ದುನಿಯಾ ಬದಲಾದರೂ ಮಗ್ಗಿ ಬದಲಾಗಲ್ಲ’ ಎನ್ನುವ ಅಡಿಬರಹವಿದೆ. ತೆಲುಗಿನ ಖ್ಯಾತ ನಟ‌ ಸುಮನ್, ಉಮೇಶ್ ಬಣಕಾರ್, ಕುರಿ ರಂಗ, ರವಿಕಾಳೆ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಕ್ಲಾರೆನ್ಸ್ ಅಲೇನ್ ಕ್ರಿಸ್ಟ ಸಂಗೀತ, ಸಿದ್ದಾರ್ಥ್ ರಾಜ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here