ನಟ ನಾನಿ ವೃತ್ತಿಬದುಕಿನ ಮಹತ್ವಾಕಾಂಕ್ಷೆಯ ‘ಶ್ಯಾಮ್‌ ಸಿಂಗ್ ರಾಯ್‌’ ತೆಲುಗು ಸಿನಿಮಾದ ಹೊಸ ಲುಕ್ ಬಿಡುಗಡೆಯಾಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಸೂಪರ್‌ನ್ಯಾಚುಲರ್‌ ಥ್ರಿಲ್ಲರ್‌ ಚಿತ್ರವಿದು.

ಭೂಗತ ಜಗತ್ತಿನ ಸಿನಿಮಾಗಳಿಗೆ ‘ಗಾಡ್‌ ಫಾದರ್‌’ ಹಾಲಿವುಡ್‌ ಸಿನಿಮಾ ಮೂಲ ಪ್ರೇರಣೆ. ಜಗತ್ತಿನ ಯಾವುದೇ ಭಾಷೆಗಳಲ್ಲಾಗಲಿ ಈ ಸಿನಿಮಾದ ಮೇಕಿಂಗ್‌, ಕಲಾವಿದರ ಭಾವ ಭಂಗಿಗಳನ್ನು ಆಗಿಂದಾಗ್ಗೆ ಅನುಕರಣೆ ಮಾಡುವುದಿದೆ. ‘ಶ್ಯಾಮ್ ಸಿಂಗ್ ರಾಯ್‌’ ತೆಲುಗು ಚಿತ್ರದಲ್ಲಿ ಹೀರೋ ನಾನಿ ಅವರು ‘ಗಾಡ್‌ ಫಾದರ್‌’ನ ಮರ್ಲಿನ್ ಬ್ರ್ಯಾಂಡೋ ಪೋಸ್‌ವೊಂದನ್ನು ಕಾಪಿ ಮಾಡಿದ್ದಾರೆ. ಚಿತ್ರದಲ್ಲಿ ಭೂಗತ ದೊರೆಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗಿದು ವೃತ್ತಿ ಬದುಕಿನ ವಿಶೇಷ ಪಾತ್ರ. ಬೆರಳುಗಳ ಮಧ್ಯೆ ಸಿಗರೇಟು ಸಿಗಿಸಿ ಚೇರ್‌ನಲ್ಲಿ ಕುಳಿತ ಅವರ ಲುಕ್ ಇಂಟೆನ್ಸೀವ್‌ ಆಗಿದೆ.

ಕಳೆದೆರಡು ವರ್ಷಗಳಿಂದ ಸುದ್ದಿಯಲ್ಲಿರುವ ‘ಶ್ಯಾಮ್ ಸಿಂಗ್ ರಾಯ್‌’ ಚಿತ್ರದಲ್ಲಿ ನಾನಿ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುಪಾಲು ಚಿತ್ರೀಕರಣ ಕೊಲ್ಕೊತ್ತಾದಲ್ಲಿ ನಡೆದಿದೆ. ಸಾಯಿ ಪಲ್ಲವಿ, ಕೃತಿ ಶೆಟ್ಟಿ ಮತ್ತು ಮಡೋನ್ನಾ ಸೆಬಾಸ್ಟಿಯನ್‌ ಚಿತ್ರದ ಮೂವರು ನಾಯಕಿಯರು. ‘ದಿ ರೈಸ್ ಆಫ್‌ ಶ್ಯಾಮ್‌’ ಮೊದಲ ಲಿರಿಕಲ್ ವೀಡಿಯೋ ಇದೇ 6ನೇ ತಾರೀಖಿನಂದು ಬಿಡುಗಡೆಯಾಗಲಿದೆ. ವೆಂಕಟ್ ಬೊಯನಪಳ್ಳಿ ನಿರ್ಮಾಣದ ಚಿತ್ರವನ್ನು ರಾಹುಲ್‌ ಸಂಕೃತ್ಯನ್ ನಿರ್ದೇಶಿಸುತ್ತಿದ್ದಾರೆ. ಮೂಲ ತೆಲುಗು ಮತ್ತು ತಮಿಳು, ಕನ್ನಡ, ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳಲ್ಲಿ ಡಿಸೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

Previous articleDIFFನಲ್ಲಿ OTT ಕುರಿತ ಚರ್ಚೆ; ಹನ್ಸಲ್ ಮೆಹ್ತಾ, ಜ್ಯೂಹಿ ಚತುರ್ವೇದಿ ಭಾಗಿ
Next articleದುನಿಯಾ ಬದಲಾದರೂ ಮಗ್ಗಿ ಬದಲಾಗಲ್ಲ!; ‘ಖಲಾಸ್’ ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಆಯೇಷಾ

LEAVE A REPLY

Connect with

Please enter your comment!
Please enter your name here