‘ಬಾಹುಬಲಿ’ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ‘RRR’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಅದ್ಧೂರಿ ಮೇಕಿಂಗ್‌ನ ಸೂಚನೆ ಸಿಕ್ಕಿದ್ದು ರಾಮ್‌ಚರಣ್‌ ತೇಜಾ, ಜ್ಯೂನಿಯರ್ ಎನ್‌ಟಿಆರ್‌, ಅಜಯ್ ದೇವಗನ್‌ ಮತ್ತು ಅಲಿಯಾ ಭಟ್‌ ಪಾತ್ರಗಳ ಕಿರುಪರಿಚಯವಿದೆ.

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬಹುಕೋಟಿ ವೆಚ್ಚದ ‘RRR’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಪೀರಿಯಡ್‌ ಸಿನಿಮಾ ‘ಬಾಹುಬಲಿ’ ಚಿತ್ರದಂತೆ ದೊಡ್ಡ ಕ್ಯಾನ್ವಾಸ್‌ನಲ್ಲೇ ತಯಾರಾಗಿರುವ ಸಾಧ್ಯತೆಗಳಿವೆ. ಆರಂಭದಲ್ಲಿ ಸಿಂಹವನ್ನು ಚೇಸ್ ಮಾಡುವ ಜ್ಯೂನಿಯರ್ ಎನ್‌ಟಿಅರ್‌ ಸೀನ್‌ ಚಿತ್ರದ ದೊಡ್ಡ ಕ್ಯಾನ್ವಾಸ್‌ಗೆ ಸಾಕ್ಷ್ಯ ನುಡಿಯುತ್ತದೆ. ಜನರ ಸಾಮಾಜಿಕ ಹಕ್ಕುಗಳಿಗೆ ಹೋರಾಡುವ ಸೂಪರ್‌ಹೀರೋ ಪಾತ್ರಗಳಲ್ಲಿ ರಾಮ್‌ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್‌ಟಿಆರ್‌ ಗೋಚರಿಸುತ್ತಾರೆ. ತುಪಾಕಿಯೊಂದಿಗೆ ಕಾಣಿಸುವ ಬಾಲಿವುಡ್ ನಟ ಅಜಯ್ ದೇವಗನ್‌ ಮತ್ತು ಸುಂದರಿ ಅಲಿಯಾ ಭಟ್ ಅರೆಕ್ಷಣ ಕಾಣಿಸಿ ತಮ್ಮ ಪಾತ್ರಗಳ ಕುರಿತಾಗಿ ನಿರೀಕ್ಷೆ ಹುಟ್ಟಿಸುತ್ತಾರೆ.

ಮುನ್ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ ಅಂತಾರಾಷ್ಟ್ರೀಯ ಮಟ್ಟಕ್ಕೆ ನಿಲುಕುವಂತಿದೆ. ಬಾಲಿವುಡ್‌ನ ದೊಡ್ಡ ನಟ-ನಟಿಯಲ್ಲದೆ ಬ್ರಿಟಿಷ್‌ ನಟಿ ಒಲಿವಿಯಾ ಮೊರಿಸ್, ಹಾಲಿವುಡ್ ನಟ ರೇ ಸ್ಟೀವನ್‌ಸನ್‌, ಐರಿಷ್ ನಟ ಅಲಿಸನ್ ಡೂಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಬುಡಕಟ್ಟು ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮಾರಂ ಭೀಮ್‌ ಅವರ ಕತೆಗಳಿಗೆ ಕಲ್ಪನೆ ಬೆರೆಸಿ ಮಾಡುತ್ತಿರುವ ಸಿನಿಮಾ ‘RRR’. ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮ ಪಾತ್ರದಲ್ಲಿದ್ದರೆ ಜ್ಯೂನಿಯರ್ ಎನ್‌ಟಿಆರ್ ಕೊಮಾರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. 2022ರ ಜನವರಿ 7ರಂದು ಮೂಲ ತೆಲುಗು ಮತ್ತು ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಅವತರಣಿಕೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here