ಅಭಿಷೇಕ್‌ ಬಚ್ಚನ್‌ ನಟನೆಯ ‘ದಸ್ವೀ’ ಸೋಷಿಯಲ್‌ ಕಾಮಿಡಿ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ತುಷಾರ್‌ ಜಲೋಟಾ ನಿರ್ದೇಶನದ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಜಿಯೋ ಸಿನಿಮಾಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನಟ ಅಭಿಷೇಕ್‌ ಬಚ್ಚನ್‌ ಇಂದು ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ತಮ್ಮ ‘ದಸ್ವೀ’ ಹಿಂದಿ ಸಿನಿಮಾದ ಟೀಸರ್‌ ಹಂಚಿಕೊಂಡಿದ್ದಾರೆ. ತುಷಾರ್‌ ಜಲೋಟಾ ನಿರ್ದೇಶನದ ಚಿತ್ರದಲ್ಲಿ ಅವರು ಗಂಗಾ ರಾಮ್‌ ಚೌಧರಿ ಪಾತ್ರ ನಿರ್ವಹಿಸಿದ್ದಾರೆ. “From one student to another, Dasvi ke exams ke liye dher saari best wishes!” ಎನ್ನುವ ಕ್ಯಾಪ್ಶನ್‌ನೊಂದಿಗೆ ಟೀಸರ್‌ ಹಾಕಿದ್ದಾರೆ ಜ್ಯೂನಿಯರ್‌ ಬಚ್ಚನ್‌. ಟೀಸರ್‌ ಗಮನಿಸಿದಾಗ ಗಂಗಾ ರಾಮ್‌ ಚೌಧರಿ (ಅಭಿಷೇಕ್‌ ಬಚ್ಚನ್‌) ಜೈಲಿನಲ್ಲಿರುವಂತೆ ಕಾಣಿಸುತ್ತದೆ. ತಾನು 10th ಕ್ಲಾಸ್‌ ಎಕ್ಸಾಮ್‌ಗೆ ತಯಾರಿ ನಡೆಸುತ್ತಿರುವುದಾಗಿ ಪಾತ್ರ ಹೇಳುತ್ತದೆ.

ಅಭಿಷೇಕ್‌ ತಮ್ಮ ಸಿನಿಮಾದ ಟೀಸರ್‌ ಹಂಚುತ್ತಿದ್ದಂತೆ ಬಾಲಿವುಡ್‌ನ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜ್ಯೂನಿಯರ್‌ ಹೊಸ ಅವತಾರವನ್ನು ಪ್ರಶಂಸಿರುವ ಸಿಕಂದರ್‌ ಖೇರ್‌ ‘ರಾಜಾ ಬೇಟಾ’ ಎಂದಿದ್ದಾರೆ. ಅಮಿತಾಭ್‌ ಬಚ್ಚನ್‌ ಅವರು ”Superb’ ಎಂದು ಕಾಮೆಂಟ್‌ ಮಾಡಿದ್ದಾರೆ. ಯಾಮಿ ಗೌತಮಿ ಮತ್ತು ನಿಮ್ರತ್‌ ಕೌರ್‌ ಚಿತ್ರದ ನಾಯಕಿಯರು. ಮ್ಯಾಡ್‌ಡಾಕ್ಸ್‌ ಫಿಲ್ಮ್ಸ್‌ ಬ್ಯಾನರ್‌ನಡಿ ದಿನೇಶ್‌ ವಿಜಯನ್‌ ಮತ್ತು ಬೇಕ್‌ ಮೈ ಕೇಕ್‌ ಫೀಲ್ಮ್ಸ್‌ ಜೊತೆಯಾಗಿ ಸಿನಿಮಾ ನಿರ್ಮಿಸಿವೆ. ಈ ಸೋಷಿಯಲ್‌ ಕಾಮಿಡಿ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಜಿಯೋ ಸಿನಿಮಾಸ್‌ನಲ್ಲಿ ಏಪ್ರಿಲ್‌ 7ರಂದು ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here