ಸುಷ್ಮಿತಾ ಸೇನ್‌ ಅಭಿನಯದ ‘ತಾಲಿ’ ವೆಬ್‌ ಸರಣಿಯ ಮೋಷನ್‌ ಟೀಸರ್‌ ಬಿಡುಗಡೆಯಾಗಿದೆ. ಮುಂಬಯಿ ಮೂಲದ ತೃತೀಯ ಲಿಂಗಿ ಗೌರಿ ಸಾವಂತ್‌ ಅವರ ಬಯೋಪಿಕ್‌ ಇದು. ರವಿ ಜಾಧವ್‌ ನಿರ್ದೇಶನದ ಸರಣಿ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ.

ನಟಿ ಸುಷ್ಮಿತಾ ಸೇನ್ ಅಭಿನಯದ ‘ತಾಲಿ’ ಹಿಂದಿ ಸರಣಿಯ ಮೋಷನ್‌ ಟೀಸರ್‌ ಬಿಡುಗಡೆಯಾಗಿದೆ. ‘ಲಾಖ್ ಗಿರಾ ದೇ ಬಿಜ್ಲಿ ಮುಜ್‌ಪೇ, ಮೈ ತೋ ಸತ್ರಂಗ್ ಬಾನು. #ಹ್ಯಾಪಿ ಪ್ರೈಡ್’. ಎಂಬುದು ಅಡಿಬರಹ. ಈ ಸರಣಿಯು ತೃತೀಯ ಲಿಂಗಿ, ಸಾಮಾಜಿಕ ಕಾರ್ಯಕರ್ತೆ ಗೌರಿ ಸಾವಂತ್ ಅವರ ಬಯೋಪಿಕ್. ಈ ಪಾತ್ರದಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ನಟಿಸಿದ್ದಾರೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಸುಶ್ಮಿತಾ ಕಾಣಿಸಿಕೊಂಡಿರುವ ಸರಣಿಯು JioCinemaದಲ್ಲಿ ಸ್ಟ್ರೀಮ್‌ ಆಗಲಿದೆ. ಸರಣಿಯನ್ನು ರವಿ ಜಾಧವ್ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಸುಷ್ಮಿತಾ ಸೇನ್ ತಮ್ಮ Instagram ನಲ್ಲಿ ಸರಣಿಯ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವಿಡಿಯೋವನ್ನು ಹಂಚಿಕೊಂಡು ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದರು. ಸರಣಿಯಲ್ಲಿ ನಿತಿಶ್‌ ರಾಥೋರ್‌, ಅಂಕುರ್‌ ಭಾಟಿಯಾ, ಕೃತಿಕಾ ಡಿಯೋ, ಐಶ್ಚರ್ಯ ನರ್ಕಾರ್‌, ಹೇಮಾಂಗಿ ಕವಿ, ಶಾನ್‌ ಕಕ್ಕರ್‌ ನಟಿಸಿದ್ದಾರೆ.

ಮುಂಬಯಿಯಲ್ಲಿ ಹುಟ್ಟಿದ ಗೌರಿ ಸಾವಂತ್‌ ಏಳನೇ ವಯಸ್ಸಿಗೇ ತಾಯಿಯನ್ನು ಕಳೆದುಕೊಂಡರು. ಬೆಳೆದದ್ದು ಅಜ್ಜಿ ಆಶ್ರಯದಲ್ಲಿ. ಹದಿನೈದರ ಹರೆಯದಲ್ಲಿದ್ದಾಗ ತಮ್ಮ ಮನೆ ತೊರೆದರು. ಗೌರಿ ಸಾವಂತ್‌ 2000ದಲ್ಲಿ ‘ಸಖಿ ಚಾರ್ ಚೌಘಿ’ ಟ್ರಸ್ಟ್ ಸ್ಥಾಪಿಸಿದರು. ಈ NGO ಸಂಸ್ಥೆಯು ಸುರಕ್ಷಿತ ಲೈಂಗಿಕತೆಯ ಕುರಿತು ಟ್ರಾನ್ಸ್‌ಜೆಂಡರ್‌ ಜನರಿಗೆ ಸಲಹೆಯನ್ನು ನೀಡುತ್ತದೆ. 2014ರಲ್ಲಿ, ತೃತೀಯಲಿಂಗಿಗಳ ಹಕ್ಕುಗಳಿಗಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ಮೊದಲ ತೃತೀಯಲಿಂಗಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದರು, ಸುಪ್ರೀಂ ಕೋರ್ಟ್ ಟ್ರಾನ್‌ಜೆಂಡರ್‌ ಅನ್ನು ತೃತೀಯ ಲಿಂಗಿ ಎಂದು ಗುರುತಿಸಿತು. ಗೌರಿ ‘ವಿಕ್ಸ್‌’ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಚುನಾವಣಾ ಆಯೋಗದ ಸದ್ಭಾವನಾ ರಾಯಭಾರಿ ಸಹ ಆಗಿದ್ದಾರೆ.

Previous articleExecutionನಲ್ಲಿ ನಿರಾಸೆ ಮೂಡಿಸುವ ವಿಭಿನ್ನ ಸಾಮಾಜಿಕ ಪ್ರಯೋಗ ‘ಸೋಷಿಯಲ್‌ ಕರೆನ್ಸಿ’
Next articleಕನ್ನಡ ಸಿನಿಮಾ ನಿರ್ಮಾಪಕ, ವಿತರಕ, ಪ್ರದರ್ಶಕ ಕೆ ಸಿ ಎನ್‌ ಮೋಹನ್‌ ನಿಧನ

LEAVE A REPLY

Connect with

Please enter your comment!
Please enter your name here