‘ಆಚಾರ್ಯ’ ತೆಲುಗು ಸಿನಿಮಾದ ‘ಸಾನಾ ಕಷ್ಟಂ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಚಿರಂಜೀವಿ ಜೊತೆ ಯುವನಟಿ ರೆಗಿನಾ ಕಸಾಂದ್ರಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೊರಟಾಲ ಶಿವಾ ನಿರ್ದೇಶನದ ಸಿನಿಮಾ ಫೆಬ್ರವರಿ 4ರಂದು ಥಿಯೇಟರ್‌ಗೆ ಬರಲಿದೆ.

ಚಿರಂಜೀವಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ‘ಆಚಾರ್ಯ’ ಸಿನಿಮಾದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಚಿತ್ರದ ‘ಸಾನಾ ಕಷ್ಟಂ’ ಹಾಡಿನಲ್ಲಿ ನಟಿ ರೆಗಿನಾ ಕಾಣಿಸಿಕೊಂಡಿದ್ದು, ನಟ ಚಿರಂಜೀವಿ ಅವರೊಂದಿಗೆ ಕುಣಿದಿದ್ಧಾರೆ. ನಟ ಚಿರಂಜೀವಿ ಟ್ವಿಟರ್‌ ಅಕೌಂಟ್‌ನಲ್ಲಿ ಈ ಹಾಡನ್ನು ಶೇರ್‌ ಮಾಡಿ, “Turn on your speakers and get dancing. #SaanaKastam Full song out now.” ಎಂದು ಬರೆದಿದ್ದಾರೆ. ಪೆಪ್ಪಿ ಸಾಂಗ್‌ನಂತೆ ಕಾಣಿಸುವ ಇದು ಮಾಸ್‌ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದಂತಿದೆ. ರೆಗಿನಾ ವಿಶೇಷ ಮೇಕ್‌ಓವರ್‌ನೊಂದಿಗೆ ಕಾಣಿಸಿಕೊಂಡಿದ್ದರೆ, ಚಿರಂಜೀವಿ ಅಭಿಮಾನಿಗಳು ತಮ್ಮ ನೆಚ್ಚಿನ ಡ್ಯಾನ್ಸ್‌ ಸ್ಟೆಪ್‌ಗಳನ್ನು ಮೆಚ್ಚಿ ತಲೆದೂಗಿದ್ದಾರೆ.

ಲಿರಿಕಲ್‌ ವೀಡಿಯೋದಲ್ಲಿ ಸಾಂಗ್‌ ಚಿತ್ರೀಕರಣ ಸಂದರ್ಭದ ಬಿಹೈಂಡ್‌ ದಿ ಕ್ಯಾಮೆರಾ ಸನ್ನಿವೇಶಗಳೂ ಸೆರೆಯಾಗಿವೆ. ಚಿರಂಜೀವಿ ಪುತ್ರ, ಚಿತ್ರದ ನಿರ್ಮಾಪಕ ರಾಮ್‌ ಚರಣ್‌ ತೇಜಾ ಸೇರಿದಂತೆ ಚಿತ್ರತಂಡದ ತಂತ್ರಜ್ಞರು ಹಾಗೂ ಕಲಾವಿದರು ಕಾಣಿಸಿಕೊಂಡಿದ್ದಾರೆ. ಭಾಸ್ಕರಭಟ್ಲಾ ರಚಿಸಿರುವ ಹಾಡಿಗೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ. ಇಂಡಿಯನ್‌ ಐಡಲ್‌ 9ನೇ ಸೀಸನ್‌ ರೇವಂತ್‌ ಮತ್ತು ಗೀತ ಮಾಧುರಿ ಹಾಡಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ರಾಮ್‌ ಚರಣ್‌, ಕಾಜಲ್‌ ಅಗರ್‌ವಾಲ್‌ ಮತ್ತು ಪೂಜಾ ಹೆಗಡೆ ಇದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಫೆಬ್ರವರಿ 4ರಂದು ಸಿನಿಮಾ ತೆರೆಕಾಣಲಿದೆ. ಚಿರಂಜೀವಿ ಸದ್ಯ ‘ಗಾಡ್‌ಫಾದರ್‌’, ‘ಭೋಲಾ ಶಂಕರ್‌’ ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ.

Previous articleನೂತನ ವರ್ಷಾಚರಣೆಯ ವೀಡಿಯೋ ಹಂಚಿಕೊಂಡ ಅದಿತಿ; ಭಾವಿ ಪತಿ ಜೊತೆಗೆ ಸುತ್ತಾಟ
Next article‘ಕಾಪುರುಷ್’ನ ಕರುಣಾ ಮತ್ತು ‘ಆಷಾಡದ…’ ಮಲ್ಲಿಕಾ

LEAVE A REPLY

Connect with

Please enter your comment!
Please enter your name here