ಅದ್ಧೂರಿ ಬಜೆಟ್‌ನ ತಮಿಳು ಸಿನಿಮಾ ‘ಬೀಸ್ಟ್‌’ ಶೂಟಿಂಗ್‌ ವೇಳೆಯ ಹೀರೋ ವಿಜಯ್ ಫೋಟೊ ಲೀಕ್ ಆಗಿದೆ. ಇದು ಸಿನಿಮಾ ಪ್ರೊಮೋಷನ್‌ಗೆಂದು ಚಿತ್ರತಂಡದವರೇ ಮಾಡಿರುವ ಐಡಿಯಾ ಇರಬಹುದೇ?

‘ಬೀಸ್ಟ್‌’ ತಮಿಳು ಚಿತ್ರದ ಶೂಟಿಂಗ್ ಸಂದರ್ಭದ ಫೋಟೊವೊಂದು ಲೀಕ್ ಆಗಿದೆ. ಶಾಪಿಂಗ್ ಮಾಲ್‌ವೊಂದರಲ್ಲಿನ ಆಕ್ಷನ್ ಸನ್ನಿವೇಶದಲ್ಲಿ ರಕ್ತದ ಕಲೆಯ ಷರ್ಟ್‌ ತೊಟ್ಟಿರುವ ವಿಜಯ್‌ ಫೋಟೊವನ್ನು ಚಿತ್ರತಂಡದ ಯಾರೋ ಹೊರಬಿಟ್ಟಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಫೋಟೊ, ವೀಡಿಯೋ ಲೀಕ್ ಮಾಡದಂತೆ ಚಿತ್ರತಂಡಗಳು ತುಂಬಾ ಎಚ್ಚರಿಕೆ ವಹಿಸುತ್ತವೆ. ಆದಾಗ್ಯೂ ಕೆಲವೊಮ್ಮೆ ಫೋಟೊ-ವೀಡಿಯೋಗಳು ಲೀಕ್ ಆಗುವುದಿದೆ. ಕೆಲವೊಮ್ಮೆ ಪ್ರಚಾರಕ್ಕಾಗಿ ಚಿತ್ರತಂಡವೇ ಇಂಥದ್ದೊಂದು ಸ್ಟ್ರ್ಯಾಟಜಿ ಮಾಡುವುದೂ ಇದೆ! ಈಗ ವಿಜಯ್ ಅಭಿನಯದ ‘ಬೀಸ್ಟ್‌’ ತಮಿಳು ಚಿತ್ರೀಕರಣ ಸಂದರ್ಭದಲ್ಲಿನ ಫೋಟೊ ಲೀಕ್ ಆಗಿದ್ದು, ನಟನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೀಕ್ ಆಗಿರುವ ವಿಜಯ್ ಫೋಟೊ

ಜಾರ್ಜಿಯಾದಲ್ಲಿ ಏಪ್ರಿಲ್‌ ವೇಳೆ ‘ಬೀಸ್ಟ್‌’ ಸಿನಿಮಾ ಶುರುವಾಗಿತ್ತು. 20 ದಿನಗಳ ಕಾಲ ಶೂಟಿಂಗ್ ನಡೆಸಿ ಭಾರತಕ್ಕೆ ಹಿಂದಿರುಗಿದ್ದ ತಂಡಕ್ಕೆ ಕೋವಿಡ್‌ ಕಾರಣದಿಂದಾಗಿ ಇಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಶೂಟಿಂಗ್ ವಿಳಂಬವಾಗಿದ್ದು, ಚಿತ್ರತಂಡ ಹೇಳುವಂತೆ ಈಗ ಶೇ.70ರಷ್ಟು ಚಿತ್ರೀಕರಣ ಮುಗಿದಿದೆ. ಡಿಸೆಂಬರ್ ವೇಳೆಗೆ ಪೂರ್ಣ ಶೂಟಿಂಗ್‌ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ನಡೆಸುವುದು ಚಿತ್ರತಂಡದ ಯೋಜನೆ. ಮುಂದಿನ ವರ್ಷ ಪೊಂಗಲ್‌ಗೆ ಸಿನಿಮಾ ರಿಲೀಸ್ ಮಾಡಬೇಕೆಂದು ಚಿತ್ರತಂಡ ಎಣಿಸಿತ್ತು. ಬಿಡುಗಡೆ ಮುಂದಕ್ಕೆ ಹೋಗಬಹುದು ಎನ್ನಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರದ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

Previous articleನಟ, ಲೇಖಕ ಡಾ.ಸಿದ್ದರಾಮ ಕಾರಣಿಕ ಇನ್ನಿಲ್ಲ; ‘ರಮಾಬಾಯಿ’ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದ
Next articleಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೇನೆ; ಕರಣ್ ಜೋಹರ್ ಅವರ ಕಸಮ್

LEAVE A REPLY

Connect with

Please enter your comment!
Please enter your name here