ನಟ ಸಂಜಯ್ ಕಪೂರ್ ಪುತ್ರಿ ಶಾನಯಾ ಅಭಿನಯದ ಚೊಚ್ಚಲ ಸಿನಿಮಾ ಸೆಟ್ಟೇರಿದೆ. ಸಂಜಯ್ ಕಪೂರ್ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶಾನಯಾಳ ಚಿಕ್ಕಂದಿನ ಫೋಟೋ ಶೇರ್ ಮಾಡಿ ಪುತ್ರಿಯ ಸಿನಿಮಾಯಾನಕ್ಕೆ ಶುಭ ಹಾರೈಸಿದ್ದಾರೆ.

ಹಿಂದಿ ನಟ ಸಂಜಯ್ ಕಪೂರ್‌ ಪುತ್ರಿಯ ಸಿನಿಮಾ ಪ್ರವೇಶವಾಗಿದೆ. ಈ ಮೂಲಕ ಅವರ ಕುಟುಂಬದ ಸಿನಿಮಾ ಸದಸ್ಯರ ಜೊತೆ ಆಕೆಯ ಸೇರ್ಪಡೆಯೂ ಆದಂತಾಗಿದೆ. ಶಾನಯಾರ ಕಸಿನ್‌ಗಳಾದ ಅರ್ಜುನ್ ಕಪೂರ್, ಸೋನಂ ಕಪೂರ್, ಜಾಹ್ನವಿ ಕಪೂರ್, ಹರ್ಷವರ್ಧನ್ ಕಪೂರ್, ರಿಯಾ ಕಪೂರ್‌ ಈಗಾಗಲೇ ಬೆಳ್ಳಿತೆರೆ ಸದಸ್ಯರು. ಇನ್ನು ಅವರ ದೊಡ್ಡಪ್ಪಂದಿರಾದ ಅನಿಲ್ ಕಪೂರ್‌ ಮತ್ತು ಬೋನಿ ಕಪೂರ್‌ ಬಾಲಿವುಡ್‌ಗೆ ಹಳಬರು. ಈಗ ಅವರೆಲ್ಲರೊಂದಿಗೆ ಶಾನಯಾ ಕೂಡ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ನಟ ಸಂಜಯ್ ಕಪೂರ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ  ಶಾನಯಾರ ಚಿಕ್ಕಂದಿನ ಫೋಟೊ ಹಾಕಿ, “ಇದು ಹೊಸ ಆರಂಭ, ನಿನ್ನ ಬಗ್ಗೆ ಹೆಮ್ಮೆ ಇದೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇರಲಿ. ಇದು ಆರಂಭವಷ್ಟೇ, ಇನ್ನೂ ಎತ್ತರಕ್ಕೆ ಬೆಳೆಯಬೇಕು. ಮೊದಲ ದಿನದ ಶೂಟಿಂಗ್‌ ಸಹಜವಾಗಿಯೇ ಎಕ್ಸೈಟ್‌ಮೆಂಟ್ ಇರುತ್ತದೆ. ಲವ್ ಯೂ” ಎಂದು ಸಂದೇಶ ಹಾಕಿದ್ದಾರೆ.

ಈ ವರ್ಷದ ಆರಂಭದಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್‌ ಅವರು ಶಾನಯಾ ಡೆಬ್ಯೂ ಕುರಿತು ವೀಡಿಯೊ ಹಾಕಿ, “ಧರ್ಮ ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ನಿನ್ನ ಸಿನಿಮಾ ಜರ್ನೀ ಶುರವಾಗುತ್ತಿದೆ. ಇದು ನಿನ್ನ ಬದುಕಿನಲ್ಲಿ ಸದಾ ನೆನಪಿನಲ್ಲುಳಿಯವ ಸಂದರ್ಭ” ಎಂದು ಸಂದೇಶ ಹಾಕಿದ್ದರು. ಇನ್ನು ಶಾನಯಾರ ಅಮ್ಮ ಮಹೀಪ್ ಕಪೂರ್‌, “ಶಾನಯಾ ತನ್ನ ಸಿನಿಮಾ ಅಭಿಯಾನ ಆರಂಭಿಸುತ್ತಿದ್ದಾಳೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಆಕೆಯ ಮೇಲಿರಲಿ” ಎಂದಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಇತರೆ ತಾರೆಯರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

Previous articleಐದು ಭಾಷೆಗಳಲ್ಲಿ ‘ತೋತಾಪುರಿ’ ಸಿನಿಮಾ; ಪೋಸ್ಟರ್ ಟ್ವೀಟ್ ಮಾಡಿದ ಜಗ್ಗೇಶ್
Next article2014ರ ನಂತರದ್ದು ನಿಜವಾದ ಸ್ವಾತಂತ್ರ್ಯ, 1947ರಲ್ಲಿ ಸಿಕ್ಕಿದ್ದು ಭಿಕ್ಷೆ; ಕಂಗನಾ ಮತ್ತೊಂದು ವಿವಾದ

LEAVE A REPLY

Connect with

Please enter your comment!
Please enter your name here