‘ಜವಾನ್‌’ ಹಿಂದಿ ಚಿತ್ರದಲ್ಲಿನ ನಟ ವಿಜಯ್‌ ಸೇತುಪತಿ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಸೇತುಪತಿ ಪಾತ್ರವನ್ನು ‘ಸಾವಿನ ವ್ಯಾಪಾರಿ’ ಎಂದು ಬಣ್ಣಿಸಿದೆ ಚಿತ್ರತಂಡ. ಶಾರುಖ್‌ ನಟಿಸಿ, ನಿರ್ಮಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಜವಾನ್‌’ ಸೆಪ್ಟೆಂಬರ್‌ 7ರಂದು ತೆರೆಕಾಣಲಿದೆ.

ದಕ್ಷಿಣ ಭಾರತದ ಖ್ಯಾತ ನಟ ವಿಜಯ್‌ ಸೇತುಪತಿ ಅವರ ‘ಜವಾನ್‌’ ಹಿಂದಿ ಸಿನಿಮಾದ ಲುಕ್‌ ಬಿಡುಗಡೆಯಾಗಿದೆ. ಅವರ ಪಾತ್ರವನ್ನು ‘The Dealer of Death’ ಎಂದು ಕರೆದಿದೆ ಚಿತ್ರತಂಡ. ಇದರೊಂದಿಗೆ ಸೇತುಪತಿ ಅವರು ಚಿತ್ರದಲ್ಲಿ ಖಳಪಾತ್ರ ನಿಭಾಯಿಸುತ್ತಿರುವುದು ಖಚಿತವಾಗಿದೆ. ಚಿತ್ರದ ಹೀರೋ ಮತ್ತು ನಿರ್ಮಾಪಕ ಶಾರುಖ್‌ ಖಾನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಜಯ್‌ ಸೇತುಪತಿ ಫಸ್ಟ್‌ಲುಕ್‌ ಪೋಸ್ಟರ್‌ ಹಂಚಿಕೊಂಡು, ‘ಅವನನ್ನು ತಡೆಯುವವರು ಯಾರೂ ಇಲ್ಲ. ಯಾರಾದರೂ ಇದ್ದಾರೆಯೇ?’ ಎಂದು ಟ್ವೀಟ್‌ ಮಾಡಿದ್ದಾರೆ. ಶಾರುಖ್‌ ಮತ್ತು ವಿಜಯ್‌ ಸೇತುಪತಿ ‘ಜವಾನ್‌’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರೀನ್‌ ಹಂಚಿಕೊಂಡಿದ್ದಾರೆ. ಸೇತುಪತಿ ಖಡಕ್‌ ಲುಕ್‌ ಅವರ ಅಭಿಮಾನಿಗಳಲ್ಲಿ ಚಿತ್ರ ಮತ್ತು ಪಾತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.

ಮೊನ್ನೆಯಷ್ಟೇ ನಟ ಶಾರುಖ್‌ ತಮ್ಮ ಸಿನಿಮಾದ ನಾಯಕನಟಿ ನಯನತಾರಾ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಕಾಲಿವುಡ್‌ನ ಖ್ಯಾತ ಚಿತ್ರನಿರ್ದೇಶಕ ಅಟ್ಲೀ ನಿರ್ದೇಶನದ ಈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸಂಜಯ್‌ ದತ್‌ ಇದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಮತ್ತು ಗೌರವ್ ವರ್ಮ ಚಿತ್ರ ನಿರ್ಮಿಸುತ್ತಿದ್ದಾರೆ. ಅನಿರುದ್ದ್‌ ರವಿಚಂದರ್‌ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಿನಿಮಾ ಮೂಲ ಹಿಂದಿ ಸೇರಿದಂತೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಇದೇ ಸೆಪ್ಟೆಂಬರ್‌ 7ರಂದು ಬಿಡುಗಡೆಯಾಗಲಿದೆ.

Previous article‘Bro’ ಟ್ರೈಲರ್‌ | ಪವನ್‌ ಕಲ್ಯಾಣ್‌ – ಸಾಯಿ ಧರಮ್‌ ತೆಲುಗು ಸಿನಿಮಾ 28ರಂದು ತೆರೆಗೆ
Next article‘ಸಿನಿಮಾ ರಿಲೀಸ್‌ ಆಗುತ್ತಿದ್ದು Excitement, ಭಯ ಇದೆ’ – ಅಶ್ವಿನಿ ಪುನೀತ್‌ ರಾಜಕುಮಾರ್‌

LEAVE A REPLY

Connect with

Please enter your comment!
Please enter your name here