ಪಂಕಜ್‌ ತ್ರಿಪಾಠಿ ನಟಿಸಿರುವ ‘ಕಡಕ್‌ ಸಿಂಗ್‌’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಅನಿರುದ್ಧ ರಾಯ್‌ ಚೌಧರಿ ನಿರ್ದೇಶನದ ಸಿನಿಮಾ ಡಿಸೆಂಬರ್ 8, 2023ರಂದು ZEE5 ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಕಡಕ್ ಸಿಂಗ್’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ್ದಾರೆ. ಟ್ರೇಲರ್‌ ಕಡಕ್ ಸಿಂಗ್ ಅಥವಾ ಎ ಕೆ ಶ್ರೀವಾಸ್ತವ್ ಅವರ ಸುತ್ತ ಸುತ್ತುತ್ತದೆ. ಕಡಕ್ ಸಿಂಗ್ ಆಸ್ಪತ್ರೆಗೆ ದಾಖಲಾಗಿ Retrograde amnesia ಎಂಬ ಕಾಯಿಲೆಯ ವಿರುದ್ದ ಹೋರಾಡುತ್ತಿರುತ್ತಾನೆ. ಇದರಿಂದ ಅವನು ಮರೆತುಹೋದ ತನ್ನ ನೆನಪುಗಳನ್ನು ಮರುಕಳಿಸಲಾಗದೇ ತೊಂದರೆ ಅನುಭವಿಸುತ್ತಿರುತ್ತಾನೆ. ಕೆಲವೊಂದು ಬಾರಿ ತನ್ನ ಮಗಳನ್ನು ಸಹ ಅವನು ಮರೆಯುವುದನ್ನು ಟ್ರೇಲರ್‌ನಲ್ಲಿ ಕಾಣಬಹುದು.

ಈ ಚಿತ್ರದ ಕುರಿತು ತ್ರಿಪಾಠಿ, ‘ಕಡಕ್ ಸಿಂಗ್ ನಾನು ಈ ಹಿಂದೆ ನಟಿಸಿದ್ದ ಪಾತ್ರಗಳಿಗಿಂತ ಭಿನ್ನವಾದ ಚಿತ್ರ. ನಾನು, ಟೋನಿ, ಡಾ ಪಾರ್ವತಿ, ಜಯಾ ಮತ್ತು ಸಂಜನಾ ಅವರಂತಹ ಯುವ ಮತ್ತು ಉತ್ಸಾಹಿಗಳು ಹಾಗೂ ಅದ್ಭುತ ಪ್ರತಿಭೆಗಳೊಂದಿಗೆ ಕೆಲಸ ಮಾಡಿದ್ದೇನೆ. ಎಲ್ಲರ ಶಕ್ತಿ ಮತ್ತು ಆಸಕ್ತಿಯು ಗಮನಾರ್ಹವಾದದ್ದು. ಅಲ್ಲದೆ ಕಳೆದ ರಾತ್ರಿ IFFIನಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಪ್ರೇಕ್ಷಕರು ಅದನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುರಿತು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ. ಪಂಕಜ್ ತ್ರಿಪಾಠಿ ಅವರು ಎ ಕೆ ಶ್ರೀವಾಸ್ತವ್ ಅಥವಾ ಕಡಕ್ ಸಿಂಗ್ ಆಗಿ, ಸಂಜನಾ ಸಂಘಿ ‘ಸಾಕ್ಷಿ ಶ್ರೀವಾಸ್ತವ್‌’ ಆಗಿ, ಪಾರ್ವತಿ ಟಿ ‘ಹೆಡ್ ನರ್ಸ್’ ಆಗಿ, ಜಯ ಅಹ್ಸನ್ ‘ನೈನಾ’ ಆಗಿ, ದಿಲೀಪ್ ಶಂಕರ್ ‘ತ್ಯಾಗಿ’ ಆಗಿ, ಪರೇಶ್ ಪಹುಜಾ ‘ಅರ್ಜುನ್’ ಪಾತ್ರದಲ್ಲಿ, ವರುಣ್ ಬುದ್ಧದೇವ ‘ಆದಿತ್ಯ’ನಾಗಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 8, 2023ರಂದು ZEE5 ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here