ಶ್ರೀರಾಮ್‌ ರಾಘವನ್‌ ನಿರ್ದೇಶನದ ‘ಮೇರಿ ಕ್ರಿಸ್ಮಸ್‌’ ತಮಿಳು ಮತ್ತು ಹಿಂದಿ ದ್ವಿಭಾಷಾ ಸಿನಿಮಾದ ಆಕರ್ಷಕ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ನಟಿಸುತ್ತಿರುವ ಚಿತ್ರವಿದು. ನಿರ್ಮಾಪಕರು ಚಿತ್ರದ ರಿಲೀಸ್‌ ದಿನಾಂಕವನ್ನೂ ಘೋಷಿಸಿದ್ದಾರೆ.

ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಅಭಿನಯದ ‘ಮೇರಿ ಕ್ರಿಸ್ಮಸ್‌’ ಸಿನಿಮಾದ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ವಿಂಟೇಜ್‌ ಮಾದರಿ ಪೋಸ್ಟರ್‌ಗಳು ವಿಶಿಷ್ಟವಾಗಿದ್ದು, ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿವೆ. ಪೋಸ್ಟರ್‌ನಲ್ಲಿ ವಿಜಯ್‌ ಸೇತುಪತಿ, ಕತ್ರಿನಾ ಕೈಫ್‌ ಗಂಭೀರ ಭಾವಗಳಲ್ಲಿದ್ದಾರೆ. ಹಿನ್ನೆಲೆಯಲ್ಲಿ ಟ್ಯಾಕ್ಸಿ ಇದ್ದು, ‘ರಾತ್‌ ಜಿತ್ನೀ ಸಂಗೀನ್‌ ಹೋಗಿ, ಸುಬಹ್‌ ಉಟ್ನಿ ರಂಗೀನ್‌ ಹೋಗಿ’ ಎನ್ನುವ ಸಾಲುಗಳಿವೆ. ಶ್ರೀರಾಮ್‌ ರಾಘವನ್‌ ನಿರ್ದೇಶನದ ಚಿತ್ರದ ಬಿಡುಗಡೆ ದಿನಾಂಕ 2023ರ ಡಿಸೆಂಬರ್‌ 15 ಎಂದು ನಿಗಧಿಯಾಗಿದೆ. ಚಿತ್ರದ ಹಿಂದಿ ಅವತರಣಿಕೆಯ ಇತರೆ ಪ್ರಮುಖ ಪಾತ್ರಗಳಲ್ಲಿ ಸಂಜಯ್‌ ಕಪೂರ್‌, ವಿನಯ್‌ ಪಾಠಕ್‌, ಪ್ರತಿಮಾ ಕಣ್ಣನ್‌, ಟಿನು ಆನಂದ್‌ ಇದ್ದಾರೆ. ತಮಿಳು ಅವತರಣಿಕೆಯಲ್ಲಿ ರಾಧಿಕಾ ಶರತ್‌ ಕುಮಾರ್‌, ಷಣ್ಮುಖರಾಜಾ, ಕೆವಿನ್‌ ಜೈಬಾಬು, ರಾಜೇಶ್‌ ವಿಲಿಯಂ ನಟಿಸುತ್ತಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕತ್ರಿನಾ, ‘ಶ್ರೀರಾಮ್‌ ರಾಘವನ್‌ ನನ್ನ ನೆಚ್ಚಿನ ಚಿತ್ರನಿರ್ದೇಶಕರಲ್ಲೊಬ್ಬರು. ಅವರು ನಿರೂಪಿಸುವ ಥ್ರಿಲ್ಲರ್‌ ಸಿನಿಮಾಗಳು ನನಗಿಷ್ಟ. Phenomenal actor ವಿಜಯ್‌ ಸೇತುಪತಿ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಖುಷಿಯ ವಿಷಯ’ ಎಂದಿದ್ದರು. ಕತ್ರಿಕಾ ಕೈಫ್‌ ಅಭಿನಯದಲ್ಲಿ ತೆರೆಕಂಡ ಕೊನೆಯ ಸಿನಿಮಾ ‘ಫೋನ್‌ ಬೂತ್‌’. ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದ ಅವರು ಈಗ ಎರಡು ಚಿತ್ರಗಳೊಂದಿಗೆ ತೆರೆಗೆ ಮರಳುತ್ತಿದ್ದಾರೆ. ‘ಮೇರಿ ಕ್ರಿಸ್ಮಸ್‌’ ಅಲ್ಲದೆ ಸಲ್ಮಾನ್‌ ಖಾನ್‌ರ ‘Tiger 3’ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಟೈಗರ್‌ ಫ್ರಾಂಚೈಸ್‌ ಸಿನಿಮಾದ ಅವಕಾಶಕ್ಕಾಗಿ ನಿರ್ಮಾಪಕ ಆದಿತ್ಯ ಚೋಪ್ರಾಗೆ ಧನ್ಯವಾದ ಹೇಳುತ್ತೇನೆ. ಆಕ್ಷನ್‌ ಸಿನಿಮಾ ನನಗೆ ಖುಷಿ ಕೊಡುತ್ತದೆ’ ಎನ್ನುತ್ತಾರೆ.

Previous article‘ದಯಾ’ ಟ್ರೈಲರ್‌ | ಜೆ ಡಿ ಚಕ್ರವರ್ತಿ – ರಮ್ಯಾ ನಂಬೀಸನ್‌ ತೆಲುಗು ವೆಬ್‌ ಸರಣಿ
Next articleನ್ಯಾಯಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಎನ್‌ ಕುಮಾರ್‌ ಧರಣಿ

LEAVE A REPLY

Connect with

Please enter your comment!
Please enter your name here