ನಟ ಸುದೀಪ್‌ ತಮ್ಮ ಸುದೀರ್ಘ ಅವಧಿಯ ವಿರಾಮ, KCC ಹಾಗೂ ಹೊಸ ಸಿನಿಮಾ ಪ್ರಾಜೆಕ್ಟ್‌ಗಳ ಸಿದ್ಧತೆ ಕುರಿತಂತೆ ಟ್ವೀಟ್‌ ಮಾಡಿದ್ದಾರೆ. ಅವರ ಮುಂದಿನ ದಿನಗಳು ಬ್ಯುಸಿಯಾಗಿರಲಿವೆ. ಮೂರು ಸ್ಕ್ರಿಪ್ಟ್‌ಗಳನ್ನು ಓಕೆ ಮಾಡಿದ್ದು, ಅದಕ್ಕೆ ತಯಾರಿ ನಡೆಸಿದ್ದಾರೆ.

ತಮ್ಮ ದೀರ್ಘಾವಧಿಯ ವಿರಾಮದ ಬಗ್ಗೆ ನಟ ಸುದೀಪ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಬಿಗ್ ಹೆಲೋ ಮೂಲಕ ಟ್ವೀಟ್ ಮಾಡಿರುವ ನಟ ತಮ್ಮೆಲ್ಲಾ ಮೀಮ್ಸ್ ಮತ್ತು ಟ್ವೀಟ್‌ಗಳನ್ನು ‘ಕಿಚ್ಚ 46’ ಕಡೆಗೆ ಅರ್ಥೈಸಿಕೊಳ್ಳಿ, ಇದು ತಮಗೆ ವಿಶೇಷ ಪ್ರೀತಿಯ ಭಾವನೆ ನೀಡುತ್ತದೆ ಎಂದಿದ್ದಾರೆ. ”ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ವಿರಾಮದ ಅಗತ್ಯವಿತ್ತು. ಆಗ ಕೋವಿಡ್ ಬಿಕ್ಕಟ್ಟಿನ ಸಮಯವಾದ್ದರಿಂದ ಹೆಚ್ಚು ಶ್ರಮ, ಒತ್ತಡ ಬೇಡವೆನಿಸಿತ್ತು. ಜೊತೆಗೆ ಬಿಗ್‌ಬಾಸ್‌ (OTT TV) ಹೆಚ್ಚು ಕಾಲಾವಧಿ ತೆಗೆದುಕೊಂಡಿತ್ತು. ನನ್ನ ಬ್ರೇಕ್ ಆನಂದಿಸಲು ಕ್ರಿಕೆಟ್ ಉತ್ತಮ ಮಾರ್ಗವಾಗಿದ್ದು KCCಯಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಉತ್ಸಾಹ ನೀಡುತ್ತದೆ” ಎಂದಿದ್ದಾರೆ.

ಇದರೊಂದಿಗೆ ಮುಂದಿನ ಅಪ್‌ಡೇಟ್ಸ್‌ಗಳನ್ನು ತಿಳಿಸಿರುವ ಕಿಚ್ಚ ಮೂರು ಸ್ಕ್ರಿಪ್ಟ್‌ಗಳನ್ನು ಅಂತಿಮಗೊಳಿಸಿರುವುದಾಗಿ ಹಾಗೂ ಅವುಗಳಿಗೆ ಹಗಲಿರುಳು ಸಿದ್ಧತೆ ಸಾಗುತ್ತಿದೆ ಮತ್ತು ಅದರ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ‘ವಿಕ್ರಾಂತ್‌ ರೋಣ’ ನಂತರ ಅವರು ಅತಿಥಿಯಾಗಿ ಕಾಣಿಸಿಕೊಂಡಿರುವ ‘ಕಬ್ಜ’ ವಾರಗಳ ಹಿಂದೆ ತೆರೆಕಂಡಿತ್ತು. ಉಪೇಂದ್ರ, ಶ್ರಿಯಾ ಶರಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಸುದೀಪ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಕಬ್ಜ’ 1942 ರಿಂದ 1984ರ ನಡುವಿನ ಭಾರತದಲ್ಲಿ ದರೋಡೆಕೋರರ ಉದಯದ ಅವಧಿಯ ಚಿತ್ರವಾಗಿದ್ದು ಮಾಫಿಯಾ ಜಗತ್ತಿನಲ್ಲಿ ಸಿಲುಕಿಕೊಳ್ಳುವ ಸ್ವಾತಂತ್ರ ಹೋರಾಟಗಾರನ ಮಗನ ಕಥಾನಕ.

LEAVE A REPLY

Connect with

Please enter your comment!
Please enter your name here