ತಮ್ಮ ನಟನೆಯ ‘ಮಾರ್ಕ್‌ ಆಂಥೋನಿ’ ಸಿನಿಮಾದ ಹಿಂದಿ ಅವತರಣಿಕೆ ಸೆನ್ಸಾರ್‌ ಮಾಡಲು CBFC ಅಧಿಕಾರಿಗಳು 6.5 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ತಮಿಳು ನಟ ವಿಶಾಲ್‌ ಆರೋಪಿಸಿದ್ದರು. ಕೇಂದ್ರ ಸರ್ಕಾರ ಈ ಬಗ್ಗೆ ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ CBI ತನಿಖೆಗೆ ಆದೇಶಿಸಿದೆ.

ವಿಶಾಲ್‌ ಮತ್ತು ಎಸ್‌ ಜೆ ಸೂರ್ಯ ನಟನೆಯ ‘ಮಾರ್ಕ್‌ ಆಂಥೋನಿ’ ತಮಿಳು ಸಿನಿಮಾ ಕಳೆದ ವಾರ ತೆರೆಕಂಡಿತ್ತು. ಈ ಚಿತ್ರದ ಹಿಂದಿ ಅವತರಣಿಕೆ ಮೊನ್ನೆ ತೆರೆಕಂಡಿದೆ. ಹಿಂದಿ ಅವತರಣಿಕೆ ಸೆನ್ಸಾರ್‌ ಮಾಡಲು CBFC ಅಧಿಕಾರಿಗಳು ಆರೂವರೆ ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಚಿತ್ರದ ಹೀರೋ ವಿಶಾಲ್‌ ಆರೋಪಿಸಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರೊಂದು ವೀಡಿಯೋ ಪೋಸ್ಟ್‌ ಮಾಡಿದ್ದರು. ಲಂಚದ ಹಣ ಪಾವತಿಸಿದ ಅಕೌಂಟ್‌ ನಂಬರ್‌, ಅಧಿಕಾರಿಗಳ ಹೆಸರುಗಳನ್ನೂ ಅವರು ನಮೂದಿಸಿದ್ದರು.

ನಟ ವಿಶಾಲ್‌ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ, ‘ತೆರೆಯ ಮೇಲೆ ಭ್ರಷ್ಟಾಚಾರ ತೋರಿಸುವುದೇನೋ ಸರಿ. ಆದರೆ ನಿಜ ಜೀವನದಲ್ಲೂ ನೋಡಿದಾಗ ಅರಗಿಸಿಕೊಳ್ಳುವುದು ಕಷ್ಟ. ನಮ್ಮ ಮಾರ್ಕ್‌ ಆಂಥೋನಿ ಸಿನಿಮಾ ಸೆನ್ಸಾರ್‌ ಮಾಡಿಸಲು CBFCಗೆ ಆರೂವರೆ ಲಕ್ಷ ರೂ. ಕೊಡಬೇಕಾಯ್ತು. ನನ್ನ ನಟನಾ ಬದುಕಿನಲ್ಲಿ ಇಂಥದ್ದೊಂದು ಸಂದರ್ಭವನ್ನು ಎಂದಿಗೂ ಎದುರಿಸಿರಲಿಲ್ಲ. ನಮ್ಮ ಸಿನಿಮಾ ತೆರೆಕಾಣಬೇಕಿದ್ದುದರಿಂದ ಅನಿವಾರ್ಯವಾಗಿ ಲಂಚ ಕೊಡುವ ಪರಿಸ್ಥಿತಿ ಎದುರಾಯ್ತು’ ಎಂದು ವಿಶಾಲ್‌ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ CBI ತನಿಖೆಗೆ ಆದೇಶಿಸಿದೆ.

LEAVE A REPLY

Connect with

Please enter your comment!
Please enter your name here