ಕಾರ್ತೀಕ್‌ ನರೇನ್‌ ನಿರ್ದೇಶನದಲ್ಲಿ ಧನುಷ್‌ ಮತ್ತು ಮಾಳವಿಕಾ ಮೋಹನನ್‌ ನಟಿಸಿರುವ ‘ಮಾರನ್‌’ ತಮಿಳು ಸಿನಿಮಾ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನಟಿ ಮಾಳವಿಕಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ.

“Happy Valentine’s Day from us to you! #Maaran. See you soon on @disneyplusHSTam,” ಎಂದು ತಮ್ಮ ‘ಮಾರನ್‌’ ತಮಿಳು ಸಿನಿಮಾ ಸುದ್ದಿಯನ್ನು ನಾಯಕನಟಿ ಮಾಳವಿಕಾ ಮೋಹನನ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾರ್ತೀಕ್‌ ನರೇನ್‌ ನಿರ್ದೇಶನದಲ್ಲಿ ಧನುಷ್‌ ಮತ್ತು ಮಾಳವಿಕಾ ನಟನೆಯ ಆಕ್ಷನ್‌ ಥ್ರಿಲ್ಲರ್‌ ‘ಮಾರನ್‌’ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಧನುಷ್‌ ನಟನೆಯ ಈ ಹಿಂದಿನ ಹಿಂದಿ ಸಿನಿಮಾ ‘ಅತ್ರಂಗಿ ರೇ’ ಕೂಡ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಸಮುದ್ರಖನಿ, ಸ್ಮೃತಿ ವೆಂಕಟ್‌, ಕೃಷ್ಣಕುಮಾರ್‌ ಬಾಲಸುಬ್ರಹ್ಮಣ್ಯನ್‌, ಮಹೇಂದ್ರನ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಧನುಷ್‌ರ ‘ಅಸುರನ್‌’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಜಿ.ವಿ.ಪ್ರಕಾಶ್‌ ಕುಮಾರ್‌ ‘ಮಾರನ್‌’ಗೆ ಸಂಗೀತ ನಿರ್ದೇಶಿಸುತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here