ಕಣ್ಣನ್‌ ತಾಮರಕ್ಕುಳಂ ನಿರ್ದೇಶನದ ‘ವಿರುನ್ನು’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅರ್ಜುನ್‌ ಸರ್ಜಾ ಮತ್ತು ನಿಕ್ಕಿ ಗಲ್ರಾನಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ವಿರುನ್ನು’ ಆಕ್ಷನ್‌ – ಥ್ರಿಲ್ಲರ್‌ ಮಲಯಾಳಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕಣ್ಣನ್ ತಾಮರಕ್ಕುಳಂ ಅವರು ನಿರ್ದೇಶಿಸಿರುವ ಚಿತ್ರವು ಮಿಸ್ಟರಿ ಥ್ರಿಲ್ಲರ್ ಆಗಿದ್ದು, ನಿಕ್ಕಿ ಗಲ್ರಾನಿ ನಾಯಕಿಯಾಗಿ ನಟಿಸಿದ್ದಾರೆ. ಆಶಾ ಶರತ್, ಹರೀಶ್ ಪೆರಾಡಿ, ಬೈಜು ಸಂತೋಷ್, ಮುಖೇಶ್ ಮತ್ತು ಧರ್ಮಜನ್ ಬೋಲ್ಗಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಆಕ್ಷನ್‌ ಕಿಂಗ್‌ ಅರ್ಜುನ್ ಸರ್ಜಾ ಅವರ ರೋಮಾಂಚನಕಾರಿ ಸಾಹಸ ದೃಶ್ಯಗಳನ್ನು ನೋಡಬಹುದು. ನಿಕ್ಕಿ ಗಲ್ರಾನಿಯನ್ನು ಅಪರಿಚಿತ ಗೂಂಡಾ ಗುಂಪೊಂದು ಹಿಂಬಾಲಿಸುತ್ತಿರುತ್ತದೆ. ಅರ್ಜುನ್‌ ಆ ಗುಂಪಿನಿಂದ ಆವಳನ್ನು ರಕ್ಷಿಸುತ್ತಾನೆ. ಬೈಜು ಸಂತೋಷ್ ಅವರು ಇತ್ತೀಚೆಗೆ ಮಲಯಾಳಂ ಚಿತ್ರಗಳಾದ ‘ಆರ್‌ಡಿಎಕ್ಸ್’, ‘ರಾಬರ್ಟ್ ಡೋನಿ ಕ್ಸೇವಿಯರ್’, ‘ಲೂಸಿಫರ್’ ಮತ್ತು ‘ಮಿನ್ನಲ್ ಮುರಳಿ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗಿರೀಶ್ ನೆಯ್ಯರ್ ನಿರ್ಮಿಸಿದ್ದು, ದಿನೇಶ್ ಪಲ್ಲತ್ ಚಿತ್ರಕಥೆ ಬರೆದಿದ್ದಾರೆ. ರತೀಶ್ ವೇಗ ಸಂಗೀತ ಸಂಯೋಜನೆ, ರಫೀಕ್ ಅಹಮದ್, ಹರಿ ನಾರಾಯಣ್, ಮೋಹನ್ ರಾಜನ್ ಸಾಹಿತ್ಯ, ವಿಟಿ ಶ್ರೀಜಿತ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here