ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ (48 ವರ್ಷ) ನಿನ್ನೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕೋವಿಡ್‌ ಸೋಂಕಿಗೆ ಈಡಾಗಿದ್ದ ಅವರು ಮೂತ್ರಕೋಶ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ದಕ್ಷಿಣ ಭಾರತ ಸಿನಿಮಾರಂಗದ ಜನಪ್ರಿಯ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ (48 ವರ್ಷ) ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ ಸೋಂಕಿನಿಂದಾಗಿ ಕಿಡ್ನೀ ವೈಫಲ್ಯ ಕಾಣಿಸಿಕೊಂಡಿದ್ದರಿಂದ ಕಿಡ್ನೀ ಟ್ರಾನ್ಸ್‌ಪ್ಲಾಂಟ್‌ ಸರ್ಜರಿಗೆ ತಯಾರಿ ನಡೆದಿತ್ತು. ಅಷ್ಟರಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ. ವಿದ್ಯಾಸಾಗರ್‌ ಅವರು ಬೆಂಗಳೂರು ಮೂಲದ ಉದ್ಯಮಿ. 2009ರಲ್ಲಿ ನಟಿ ಮೀನಾ – ವಿದ್ಯಾಸಾಗರ್‌ ವಿವಾಹ ನೆರವೇರಿತ್ತು. ಈ ದಂಪತಿಗೆ ಪುತ್ರಿ ನೈನಿಕಾ ಇದ್ದಾರೆ. ವಿಜಯ್‌ ಅಭಿನಯದ ‘ಥೆರಿ’ ತಮಿಳು ಚಿತ್ರದ ಮೂಲಕ ನೈನಿಕಾ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ನಟಿ ಮೀನಾ ಅವರು ಬಾಲನಟಿಯಾಗಿ ಸಿನಿಮಾಗೆ ಪರಿಚಯವಾಗಿದ್ದವರು. ಪ್ರಮುಖವಾಗಿ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿದ್ಯಾಸಾಗರ್‌ ನಿಧನಕ್ಕೆ ಚಿತ್ರರಂಗದ ಮೀನಾರ ಆಪ್ತರನೇಕರು ಸಂತಾಪ ಸೂಚಿಸಿದ್ದಾರೆ.

Previous articleನವೀನ ತಂತ್ರಜ್ಞಾನದೊಂದಿಗೆ ‘ಭಾಗ್ಯವಂತರು’; ಜುಲೈ 8ರಂದು ತೆರೆಗೆ
Next articleಮನರಂಜನೆ ಜೊತೆ ಸಂದೇಶ ದಾಟಿಸುವ ಜವಾಬ್ದಾರಿ

LEAVE A REPLY

Connect with

Please enter your comment!
Please enter your name here