ಮೊನ್ನೆಯಷ್ಟೇ ನಟಿ ಮೇಘನಾರ ಹೊಸ ಸಿನಿಮಾ ಸೆಟ್ಟೇರಿತ್ತು. ಇಂದು ಅವರಿಗೆ ಪುತ್ರ ರಾಯನ್‌ ಸರ್ಜಾ ಹುಟ್ಟುಹಬ್ಬದ ಸಂಭ್ರಮ. ಕಾಡಿನ ಥೀಮ್‌ನಲ್ಲಿ ಮನೆಯನ್ನು ಸಿಂಗರಿಸಿ ಪುತ್ರನ ಮೊದಲ ವರ್ಷದ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿದ್ದಾರವರು.

ನಟಿ ಮೇಘನಾ ಇಂದು ತಮ್ಮ ಪುತ್ರನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಕಾಲಿಕವಾಗಿ ಅಗಲಿದ ನಟ ಚಿರಂಜೀವಿ ಮತ್ತು ನಟಿ ಮೇಘನಾ ಪುತ್ರ ರಾಯನ್‌ ಇಂದು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮೇಘನಾ ತಮ್ಮ ಪುತ್ರನ ಹುಟ್ಟುಹಬ್ಬವನ್ನು ವಿಶೇವಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ರಾಯನ್‌ಗೆ ಕಾಡು, ಪ್ರಾಣಿಗಳು ಎಂದರೆ ಬಲು ಇಷ್ಟವಂತೆ. ಹಾಗಾಗಿ ಅವರ ಮನೆಯನ್ನು ಕಾಡಿನ ಥೀಮ್‌ನಂತೆ ಸಿಂಗರಿಸಲಾಗಿದೆ. ಮನೆ ಎದುರು ‘ವೆಲ್‌ಕಮ್‌ ಟು ರಾಯನ್‌ ಕಿಂಗ್‌ಡಮ್‌’ ಎನ್ನುವ ಸ್ವಾಗತ ಕಮಾನು ಇದೆ. ಕುಟುಂಬದವರು ಮತ್ತು ಆತ್ಮೀಯವರಿಗೆ ಸಮಾರಂಭಕ್ಕೆ ಆಹ್ವಾನ ಹೋಗಿದೆ. ಚಿತ್ರರಂಗದಲ್ಲಿನ ಮೇಘನಾ ಮತ್ತು ಅವರ ತಾರಾ ಪೋಷಕರಾದ ಸುಂದರರಾಜ್‌ – ಪ್ರಮಿಳಾ ಜೋಷಾಯ್ ಆಪ್ತರು ಬಂದು ರಾಯನ್‌ಗೆ ಶುಭ ಹಾರೈಸಿದ್ದಾರೆ.

ರಾಯನ್ ಸರ್ಜಾ ಜೊತೆ ಪುತ್ರಿಯೊಂದಿಗೆ ನಟಿ ಸುಧಾರಾಣಿ

“ಮಕ್ಕಳಿಗೆ ಸಾಮಾನ್ಯವಾಗಿ ಮೊದಲ ವರ್ಷದ ಹುಟ್ಟುಹಬ್ಬ ನೆನಪಿರೋಲ್ಲ. ಆದರೆ ತಾಯಿಯಾಗಿ ನನಗೆ ಈ ಹುಟ್ಟುಹಬ್ಬವನ್ನು ತುಂಬಾ ಸುಂದರವಾಗಿ ಸೆಲೆಬ್ರೇಟ್ ಮಾಡಬೇಕೆನ್ನುವ ಆಸೆಯಿತ್ತು. ಮುಂದೆ ನನ್ನ ಮಗ ಕೂಡ ತನ್ನ ಮೊದಲ ವರ್ಷದ ವೀಡಿಯೋ ನೋಡಿ ಅಚ್ಚರಿ ಪಡಬೇಕೆನ್ನುವಂತೆ ಬರ್ತ್‌ಡೇ ಅರೇಂಜ್ ಮಾಡಿದ್ದೇನೆ. ಅವನನ್ನು ಎಲ್ಲರೂ ಪ್ರೀತಿಯಿಂದ ಸಿಂಬಾ ಎನ್ನುತ್ತಾರೆ. ಈ ಕಾಡಿನ ಅವನಿಗೆ ತುಂಬಾ ಇಷ್ಟವಾಗಿದೆ” ಎಂದು ಸಂಭ್ರಮಿಸುತ್ತಾರೆ ಮೇಘನಾ. ಮೊನ್ನೆಯಷ್ಟೇ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾರ ಹೊಸ ಸಿನಿಮಾ ಸೆಟ್ಟೇರಿತ್ತು. ಪನ್ನಗ ಭರಣ ನಿರ್ಮಿಸಲಿರುವ ಸಿನಿಮಾ ಮೂಲಕ ಮೇಘನಾ ತೆರೆಗೆ ಮರಳುತ್ತಿದ್ದಾರೆ.

ಬರ್ತ್‌ಡೇ ಪಾರ್ಟಿಯಲ್ಲಿ ನಟಿ ಮೇಘನಾ

LEAVE A REPLY

Connect with

Please enter your comment!
Please enter your name here