ದೀಪಕ್‌ ಅರಸ್‌ ನಿರ್ದೇಶನದ ‘ಶುರಗ್‌ ಫ್ಯಾಕ್ಟರಿ’ ಸಿನಿಮಾದ ‘ಜಹಾಪನಾ’ ಸಾಂಗ್‌ ರಿಲೀಸ್‌ ಆಗಿದೆ. ಜಯಂತ ಕಾಯ್ಕಿಣಿ ರಚನೆಯ ಈ ಹಾಡಿಗೆ ಕಬೀರ್‌ ರಫಿ ಸಂಗೀತ ಸಂಯೋಜನೆಯಿದೆ. ನಿಹಾಲ್‌ ತಾವ್ರೊ ಮತ್ತು ಅಮೃತಾ ನಾಯಕ್‌ ಹಾಡಿಗೆ ದನಿಯಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ಹೀರೋ ಆಗಿ ನಟಿಸಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ ಅವರು ‘ಜಹಾಪನಾ’ ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸಿದ್ದಾರೆ. ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ದನಿಯಲ್ಲಿ ಈ ಹಾಡು ಮೂಡಿಬಂದಿದೆ. ಧನಂಜಯ್ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ಕಬೀರ್ ರಫಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಟ್ರೇಲರ್ ಪ್ರೇಕ್ಷಕರ ಮನಗೆದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಅವರ ಸಿನಿ ವೃತ್ತಿಯಲ್ಲಿಯೇ ‘ಶುಗರ್ ಫ್ಯಾಕ್ಟರಿ’ ದೊಡ್ಡ ಬಜೆಟ್ ಚಿತ್ರವೆಂದು ಹೇಳಲಾಗುತ್ತಿದೆ. Balamani Productions ಬ್ಯಾನರ್‌ ಅಡಿ ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ನಟಿಸಿದ್ದಾರೆ. ನವೆಂಬರ್ 24, 2023ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here