ಕನ್ನಡ ಚಿತ್ರನಿರ್ದೇಶಕ ಬಿ.ಎಂ.ಗಿರಿರಾಜ್‌ ನಿರ್ದೇಶನದಲ್ಲಿ ಹಿಂದಿ ಥ್ರಿಲ್ಲರ್‌ ವೆಬ್‌ ಸರಣಿ ಸೆಟ್ಟೇರಲಿದೆ. ಎಂಎಕ್ಸ್‌ಪ್ಲೇಯರ್ OTT ಪ್ಲಾಟ್‌ಫಾರ್ಮ್‌ಗಾಗಿ ಗಿರಿರಾಜ್‌ ಮೊದಲ ಸೀಸನ್‌ನಲ್ಲಿ ಒಂಬತ್ತು ಎಪಿಸೋಡ್ ನಿರ್ದೇಶಿಸಲಿದ್ದಾರೆ.

‘ಜಟ್ಟ’, ‘ಮೈತ್ರಿ’, ‘ಅಮರಾವತಿ’ ಸಿನಿಮಾಗಳ ಮೂಲಕ ತಮ್ಮ ಛಾಪು ಮೂಡಿಸಿರುವ ನಿರ್ದೇಶಕ ಬಿ.ಎಂ.ಗಿರಿರಾಜ್‌ ಹಿಂದಿ ವೆಬ್ ಸರಣಿ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ವೆಬ್‌ ಪ್ಲಾಟ್‌ಫಾರ್ಮ್‌ಗೆ ಅವರು ಹೊಸಬರೇನಲ್ಲ. ಮೂರು ವರ್ಷಗಳ ಹಿಂದೆಯೇ ಅವರು ‘ರಕ್ತಚಂದನ’ ಕನ್ನಡ ಸರಣಿ ಮಾಡಿದ್ದರು. ಹಾಗಾಗಿ OTTಗೆ ಅಗತ್ಯವಿರುವ ಕಂಟೆಂಟ್‌, ನರೇಟಿವ್‌ ಬಗ್ಗೆ ಅವರಿಗೆ ಗೊತ್ತಿದೆ. ಈಗ ಎಂಎಕ್ಸ್‌ ಪ್ಲೇಮರ್‌ಗಾಗಿ ಒಂಬತ್ತು ಎಪಿಸೋಡ್‌ಗಳ ಹಿಂದಿ ವೆಬ್ ಸರಣಿಗೆ ಚಿತ್ರಕಥೆ ಮಾಡಿಕೊಂಡಿದ್ದಾರೆ. ಸರಣಿಯ ಪ್ರಮುಖ ಪಾತ್ರದಲ್ಲಿ ‘ಸೂರ್ಯವಂಶ’, ‘ಓ ನನ್ನ ನಲ್ಲೆ’, ‘ಕವಚ’ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಇಶಾ ಕೊಪ್ಪೀಕರ್ ನಟಿಸಲಿದ್ದಾರೆ. ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿರುವ ರಾಕೇಶ್ ಬೇಡಿ, ಫ್ರೆಡ್ಡಿ ಧಾರುವಾಲಾ ಇತರರು ಸರಣಿಯಲ್ಲಿ ಇರುತ್ತಾರೆ. ಸರಣಿಗಿನ್ನೂ ಶೀರ್ಷಿಕೆ ನಿಗಧಿಯಾಗಿಲ್ಲ.

“ನನ್ನ ನಿರ್ದೇಶನದ ಕನ್ನಡಿಗ ಚಿತ್ರದ ಕೆಲಸಗಳು ಮುಗಿದಿವೆ. ಮುಂದಿನ ತಿಂಗಳಲ್ಲಿ ಬೆಬ್‌ ಸರಣಿಗೆ ಚಾಲನೆ ಸಿಗಲಿದೆ. ಎಂಎಕ್ಸ್‌ಪ್ಲೇಯರ್‌ ನಿರ್ಮಾಣ ಮಾಡುತ್ತಿದ್ದು, ತಂತ್ರಜ್ಞರು ನಮ್ಮವರೇ ಇರಲಿದ್ದಾರೆ. ನನ್ನ ‘ಮೈತ್ರಿ’ ಚಿತ್ರದಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ಕೃಷ್ಣಕುಮಾರ್ ಸರಣಿಗೆ ಕ್ಯಾಮರಾ ಕಾರ್ಯನಿರ್ವಹಿಸಲಿದ್ದಾರೆ. ದಿಲ್ಲಿ, ಹರಿಯಾಣದಲ್ಲಿ ಮೂವತ್ತು ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಮಾಡಲಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಗಿರಿರಾಜ್‌. ಅವರ ನಿರ್ದೇಶನದ ‘ಕನ್ನಡಿಗ’ ಚಿತ್ರದಲ್ಲಿ ರವಿಚಂದ್ರನ್‌ ಮುಖ್ಯ ಪಾತ್ರಲ್ಲಿದ್ದಾರೆ. ರವಿಚಂದ್ರನ್ ವೃತ್ತಿ ಬದುಕಿನಲ್ಲಿ ಇದೊಂದು ಪ್ರಮುಖ ಚಿತ್ರವಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಚಿತ್ರವನ್ನು ನವೆಂಬರ್‌ನಲ್ಲಿ ರಾಜ್ಯೋತ್ಸವಕ್ಕೆ ತೆರೆಗೆ ತರಬೇಕೆನ್ನುವುದು ಚಿತ್ರತಂಡದ ಆಶಯವಾಗಿತ್ತು. ಆದರೆ ದೊಡ್ಡ ಚಿತ್ರಗಳ ಬಿಡುಗಡೆಯಿಂದಾಗಿ ಥಿಯೇಟರ್‌ಗಳು ಸಿಗುತ್ತಿಲ್ಲ. ಹಾಗಾಗಿ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

Previous articleಇನ್ನೊಬ್ಬರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೇನೆ; ಕರಣ್ ಜೋಹರ್ ಅವರ ಕಸಮ್
Next articleವೆಲ್ಕಮ್ ಟು ರಾಯನ್ ಕಿಂಗ್‌ಡಮ್‌; ಚಿರು-ಮೇಘನಾ ಪುತ್ರನ ಮೊದಲ ವರ್ಷದ ಬರ್ತ್‌ಡೇ

LEAVE A REPLY

Connect with

Please enter your comment!
Please enter your name here